ಶಿವಮೊಗ್ಗ,ಆ.11: ನಗರದ ವಾಸವಿ ಪಬ್ಲಿಕ್ ಸ್ಕೂಲ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು  ಸಂಸ್ಥೆಯ ಕಾರ್ಯದರ್ಶಿ ಎಸ್.ಕೆ.ಶೇಷಾಚಲ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸವಿ ಶಾಲಾ ವತಿಯಿಂದ ಕೊರೊನಾ ಲಸಿಕಾ ಜಾಗೃತಿ ಅಭಿಯಾನದ ಅಂಗವಾಗಿ ಆ.13ರಂದು ನಗರದ ವಿವಿಧ ಕಡೆಗಳಲ್ಲಿ ಶಾಲೆಯ ಮಕ್ಕಳು ಕಿರು ನಾಟಕವನ್ನು ಪ್ರದರ್ಶನ ಮಾಡಲಿದ್ದಾರೆ. 20 ವಿದ್ಯಾರ್ಥಿಗಳ ತಂಡ ಅಂದು ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ಬೆಳಿಗ್ಗೆ 10ಗಂಟೆಗೆ ಕಿರು ನಾಟಕಕ್ಕೆ ಚಾಲನೆ ನೀಡುವರು. ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ  ಲಕ್ಷ್ಮೀಪ್ರಸಾದ್ ಮತ್ತು ಮೆಗ್ಗಾನ್ ಆಸ್ಪತ್ರೆಯ ವೈದ್ಯತ ತಂಡ ಇರುತ್ತದೆ. ಅಲ್ಲಿಂದ  ಗೋಪಾಲಗೌಡ ವೃತ್ತ, ಪೊಲೀಸ್‍ಚೌಕಿ, ರಾಮಣ್ಣಶೆಷ್ಟಿ ಪಾರ್ಕ್, ಶ್ರೀನಿಧಿ ಸರ್ಕಲ್,  ವಿದ್ಯಾನಗರಗಳಲ್ಲಿ ಕಿರು ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಆ.23ರಂದು ಮಧ್ಯಾಹ್ನ 3ಗಂಟೆಗೆ ಶಾಲೆಯ ಆವರಣದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೊರೊನಾ  ವಾರಿಯರ್ಸ್‍ಗಳನ್ನು ಸನ್ಮಾನಿಸಲಾಗುವುದು ಎಂದ ಅವರು, ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸಲು ಸೂಚನೆ ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಕೋವಿಡ್  ಸುರಕ್ಷತಾ ಲಸಿಕೆ ನೀಡಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ಡಾ.ಭರತ್, ನಿರ್ದೇಶಕ ನಾಗರಾಜ್, ಪ್ರಾಂಶುಪಾಲ ಮನು ಇದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!