ಶಿವಮೊಗ್ಗದ ಪ್ರಖ್ಯಾತ ನೃತ್ಯಸಂಸ್ಥೆಯಾದ ಸ್ಟೈಲ್ ಡಾನ್ಸ್ ಗ್ರೂಪ್ ಶಿವಮೊಗ್ಗ ಇವರ 13ನೇ ವರ್ಷದ ವಾರ್ಷಿಕೊತ್ಸವದ ಪ್ರಯುಕ್ತ ತಾಲ್ಲೂಕು ಮಟ್ಟದ ಆನ್ ಲೈನ್ ನೃತ್ಯ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು ಇದರ ದ್ವೀತಿಯ ಭಾಗವಾಗಿ “ಸೋಲೋ ಡಾನ್ಸ್ ನೃತ್ಯ ಸ್ಪರ್ಧೆ”ಯನ್ನ ಆನ್ ಲೈನ್ ಮೂಲಕ ನಡೆಸಲಿದ್ದಾರೆ .
ಈ ಸ್ಪರ್ಧೆಗೆ ಯಾವ ವಯಸ್ಸಿನ ಮಿತಿ ಇಲ್ಲ ಯಾರು ಬೇಕಾದರೂ ಭಾಗವಹಿಸಬಹುದು.ಇದರಲ್ಲಿ ಭಾಗವಹಿಸಲು ನಿಮ್ಮ ಮನೆಯಲ್ಲೆ 2ನಿಮಿಷದ ಸೋಲೋ ನೃತ್ಯವನ್ನ ಆಕರ್ಷಕವಾಗಿ ವಿಡೀಯೋ ಮಾಡಿ ( 98453 88028 ) ಸಂಸ್ಥೆಗೆ ಕಳಿಸಿದರೆ ಆಯಿತು.
ನಿಮ್ಮ ನೃತ್ಯ ಆಕರ್ಷಕವಾಗಿದ್ದರೆ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಎಲ್ಲವೂ ನಿಮಗೆ ಸಿಗಲಿದೆ.ಲಾಕ್ ಡೌನ್ ಸಮಯದಲ್ಲಿ ನಿಮ್ಮ ಸಮಯವನ್ನ ಸಂತಸದಿಂದ ಕಳೆಯಲು ಬೃಹತ್ ಭವ್ಯವೇದಿಕೆ ಇದಾಗಿದೆ ಶಿವಮೊಗ್ಗ ಮತ್ತು ಸುತ್ತ ತಾಲ್ಲೂಕಿನ ಎಲ್ಲಾ ನೃತ್ಯಕಲಾಸಕ್ತರು ಈ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ನೊಂದಣಿಗಾಗಿ : 76192 75103 / 97318 81422
ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
- ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ. - ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. - ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
- ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
*ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
*ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ. - ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.