ಶಿವಮೊಗ್ಗ:ಮೊನ್ನೆಯಷ್ಟೇ ತಾಳಿಕಟ್ಟಿಸಿಕೊಂಡು ಜೀವನ ಪೂರ್ತಿ ಗಂಡನ ಮನೆಯಲ್ಲಿ ಬಾಳುವ ಆಸೆ ಹೊತ್ತಿದ್ದ ಮನೆಯ ನೂತನ ಒಡತಿ ಕೊರೊನಾದ ಕಿರಿಕ್ಕಿಗೆ ಬಲಿಯಾಗಿದ್ದಾಳೆ.


ಕಳೆದ ಮೂರು ದಿನದ ಹಿಂದಷ್ಟೇ ಮದುವೆಯಾಗಿ ಗಂಡನ ಜೊತೆ ಬಾಳಬೇಕಿದ್ದ ಮಧುಮಗಳು ಕೊರೊನಾಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕಳೆದ ಸೋಮವಾರ ಮದುವೆಯಾಗಿ ಇನ್ನೂ ಮೂರು ದಿನಗಳು ಕಳೆದಿಲ್ಲ. ಗಂಡನ ಮನೆಗೆ ಸಾವಿರಾರು ಆಸೆ, ಕನಸ್ಸುಗಳನ್ನು ಕಂಡಿದ್ದ ಯುವತಿ ಇನ್ನಿಲ್ಲ.
ಶಿವಮೊಗ್ಗದ ಮಲವಗೊಪ್ಪದ ನಿದಿಗೆಯ ಟಿಇಎಸ್ ಕಾಲೋನಿಯ ಪೂಜಾ (22)ಸಾವು ಕಂಡಿರುವ ದುರ್ದೈವಿ.
ಪೂಜಾ ಅವರು ಹರಿಗೆಯ ನಿವಾಸಿ ಮಹೇಶ್ (24) ಅವರೊಂದಿಗೆ ಕಳೆದ ಸೋಮವಾರ ಮದುವೆಯಾಗಿತ್ತು.


ಮದುವೆಯಾದ 2ದಿನದಲ್ಲಿ ಪೂಜಾ ಅವರಿಗೆ ಮೈ ಕೈ ನೋವು ಕಾಣಿಸಿಕೊಂಡಿತ್ತು. ಇಂದು ಮಲವಗೊಪ್ಪದ ಕ್ಲಿನಿಕ್ ಗೆ ಬಂದು ದಾಖಲಾಗಿದ್ದರು. ಕ್ಲಿನಿಕ್ ನಲ್ಲಿ ಗ್ಲೂಕೋಸ್ ಹಾಕಿ ಅರ್ಧ ಗಂಟೆಯಲ್ಲಿ ಮರಣಹೊಂದಿದ್ದಾರೆ. ನಂತರ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದ ಪೂಜಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕರಾಳ ಕೊರೊನಾ ನವ ಜೀವನಕ್ಕೆ ಬೆಂಕಿ ಹಚ್ಚಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

  • ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
    ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
    ” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
    ” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
  • ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
    ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
  • ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
    *ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
    *ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
  • ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.

By admin

ನಿಮ್ಮದೊಂದು ಉತ್ತರ

error: Content is protected !!