ಶಿವಮೊಗ್ಗ: ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದ ವಾಸಿ ಹಾಗೂ ಶಿವಮೊಗ್ಗ ಸಂಸ್ಕೃತಿ ಫೌಂಡೇಷನ್ನ ಮುಖ್ಯಸ್ಥ ಕೆ.ವಿ.ಶರಣ್ ಸಿದ್ಧಾರ್ಥ (35) ಶುಕ್ರವಾರ ಕೋವಿಡ್ ಸೋಂಕಿನಿಂದ ನಿಧನರಾದರು.
ಮೃತರಿಗೆ ತಂದೆ ಹೊಳೆಹೊನ್ನೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವಿಶ್ವಾನಾಥ್, ತಾಯಿ ಸುಜಾತ ಹಾಗೂ 3 ವರ್ಷದ ಮಗಳು ಗೌರಿ ಇದ್ದಾರೆ. ಮೃತ ಕೆ.ವಿ.ಶರಣ್ ಸಿದ್ಧಾರ್ಥ ಅವರು ಸಂಸ್ಕೃತಿ ಫೌಂಡೇಷನ್ ಸಂಸ್ಥೆ ಅಡಿಯಲ್ಲಿ ಕೋವಿಡ್-೧೯ ಜಾಗೃತಿ ಬಗ್ಗೆ ಅರಿವು ಕಾರ್ಯಕ್ರಮ, ಮಾಸ್ಕ್ ವಿತರಣೆ ಹಾಗೂ ಕೊರೊನಾ ಸೋಂಕಿತರಿಗೆ ಸಹಕಾರ ಮಾಡುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಶಾಸಕ ಕೆ.ಬಿ.ಅಶೋಕ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಕೆ.ಇ.ಕಾಂತೇಶ್ ಹಾಗೂ ಕುಟುಂಬಸ್ಥರು ಸಂತಾಪ ಸೂಚಿಸಿದ್ದಾರೆ.