ಸೊರಬ: ತಾಲ್ಲೂಕಿನ ಆನವಟ್ಟಿ ಸಮೀಪದ ಗ್ರಾಮವೊಂದರಲ್ಲಿ ನಡೆಯಲಾದ ಅಪ್ರಾಪ್ತೆಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


ಮೇ.9 ರಂದು ಆನವಟ್ಟಿ ಸಮೀಪದ ಗ್ರಾಮವೊಂದರಲ್ಲಿ ಅಪ್ರಾಪ್ತೆಯೊಂದಿಗೆ 24 ವರ್ಷದ ಯುವಕನೊಬ್ಬ ವಿವಾಹವಾಗಿರುವ ಕುರಿತು ಮಾಹಿತಿ ಬಂದಿತ್ತು. ಮೇ.17 ರಂದು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಅಪ್ರಾಪ್ತ ವಯಸ್ಕಳೊಂದಿಗೆ ವಿವಾಹವಾಗಿರುವುದು ದೃಢಪಟ್ಟಿತ್ತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಸಿಡಿಪಿಒ ಡಿ. ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ವರ ಲೋಹಿತ್, ವರನ ಪೋಷಕರಾದ ಹನುಮಂತಪ್ಪ ಕೂಲೇರ್, ರೇಣುಕಮ್ಮ, ಅಪ್ರಾಪ್ತೆಯ ಪೋಷಕರಾದ ಭರಮಪ್ಪ ಕಲ್ಲುಗುಡ್ಡೇರ್, ಸವಿತಾ ಹಾಗೂ ವಿವಾಹ ಆಮಂತ್ರಣ ಪತ್ರಿಕೆ ಮುದ್ರಕರು ಮತ್ತು ಪುರೋಹಿತರ ವಿರುದ್ಧ ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ತಯ್ಯಬಾ ಕೌಸರ್ ಪಾಟೀಲ್ ನೀಡಿದ ದೂರಿನ ಅನ್ವಯ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!