
ಶಿವಮೊಗ್ಗ, ಏಪ್ರಿಲ್ 11; : ಏ.10 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಯೋ ಕಚೇರಿ ಹಿಂಭಾಗದಲ್ಲಿ ಮಲಗಿದ್ದ ಸುಮಾರು 35-40 ವರ್ಷ ವಯಸ್ಸಿನ ವ್ಯಕ್ತಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಪರೀಕ್ಷಿಸಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಮೃತ ವ್ಯಕ್ತಿಯ ಚಹರೆ ಸುಮಾರು 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು,

ಬಲಗೈ ಮೇಲೆ ಮಾದೇಶ ಎಂದು ಕನ್ನಡದಲ್ಲಿ ಹಚ್ಚೆ ಗುರುತು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಬಿಳಿಗೆರೆಗಳಿರುವ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
———————–