
ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗ ಆಯೋಜಿಸಿರುವ ಬೈಂದೂರು ಲಾವಣ್ಯ ಅರ್ಪಿಸುವ
ರಾಜೇಂದ್ರ ಕಾರಂತ್ ರಚನೆ ಮತ್ತು ನಿರ್ದೇಶನದ ’ನಾಯಿ ಕಳೆದಿದೆ’ ನಾಟಕವು ಏ.೧೯ರ ಶನಿವಾರ ಮತ್ತು ಎಸ್.ಎನ್. ಸೇತುರಾಂರವರ ರಚನೆ ಮತ್ತು ನಿರ್ದೇಶನದ ಹೊಸ ನಾಟಕ ’ತಳಿ’ ಏ.೨೭ರ ಭಾನುವಾರ ಸಂಜೆ ೬.೩೦ಕ್ಕೆ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ

ಪ್ರದರ್ಶನಗೊಳ್ಳಲಿದೆ.
ತಳಿ ನಾಟಕದ ಪಾತ್ರ ವರ್ಗದಲ್ಲಿ ಎಸ್.ಎನ್. ಸೇತುರಾಂ, ಶ್ರೀಪತಿ ಮಂಜನಬೈಲು, ಸೌಮ್ಯ ಭಾಗವತ್, ಅಪರ್ಣ ಗುಮಾಸ್ತೆ

ಕಾಣಿಸಿಕೊಳ್ಳಲಿದ್ದಾರೆ. ಸಂಗೀತ ಅರುಂದತಿ ವಸಿಷ್ಠ, ಬೆಳಕು ನಂದ ಕಿಶೋರ್, ಸರ್ವಜ್ಞ ಆಚಾರ್ಯ ಹಿನ್ನೆಲೆ ಸಂಗೀತ ನಿರ್ವಹಿಸಲಿದ್ದಾರೆ.

ಎರಡೂ ನಾಟಕಗಳ ಕೇವಲ ಒಂದೇ ಪ್ರದರ್ಶನ ಮಾತ್ರವಿದ್ದು, ತಲಾ ನಾಟಕವೊಂದಕ್ಕೆ ಟಿಕೆಟ್ ದರ ೧೦೦ ರೂ.ಗಳು. ಎರಡು ನಾಟಕಗಳ ಪ್ರವೇಶ ದರ ೨೦೦ ರೂ.ಗಳು. ಟಿಕೆಟ್ಗಾಗಿ ೯೪೪೮೪೫೮೪೫೭, ೮೩೧೦೮೭೬೨೭೭, ೯೮೪೪೧೫೩೫೩೪ಗೆ ಸಂಪರ್ಕಿಸಬಹುದು.