ವೆಂಕಟೇಶ್, ಅಗಸನಹಳ್ಳಿ
ಹೊಳೆಹೊನ್ನೂರು, ಮಾ.13:
ಇದೇ ಮೊದಲಬಾರಿ ಭದ್ರೆಯಂಗಳದ ಹೊಳೆಹೊನ್ನೂರಲ್ಲಿ ಇಂದಿರಾ ಕ್ಯಾಂಟೀನ್ ನಾಳೆಯಿಂದ ಆರಂಭಗೊಳ್ಳುತ್ತಿದೆ.
ರಾಜ್ಯದ ಯಾವುದೇ ಜನ ಹಸಿವಿನಿಂದ ಸಾಯಬಾರದೆಂದು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಈಗಿನ ಸಿಎಂ ಸಿದ್ದರಾಮಯ್ಯ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಇಲ್ಲಿ ಆರಂಭಗೊಳ್ಳುತ್ತಿದೆ.
ನಾಳೆ ಹೊಳೆಹೊನ್ನೂರಿನ ಗಾಂಧಿನಗರ ಸರ್ಕಲ್ ಸಿದ್ಲಿಪುರ ರಸ್ತೆಯಲ್ಲಿ ಬೆಳಿಗ್ಗೆ 9-30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ವಹಿಸಲಿದ್ದು, ಜಿಲ್ಲೆಯ ಎಲ್ಲಾ ಮುಖ್ಯ ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ.

ಹೊಳೆಹೊನ್ನೂರು ಕ್ಷೇತ್ರವಾಗಿದ್ದ ನಂತರದ ಬೆಳವಣಿಗೆಯಲ್ಲಿ ಭದ್ರಾವತಿ ಶಿವಮೊಗ್ಗ ತಾಲ್ಲೂಕಿನ ವ್ಯವಸ್ಥೆಯೊಳಗೆ ಗ್ರಾಮಾಂತರ ಕ್ಷೇತ್ರವಾಯಿತು. ಶಾಸಕಿ ಶಾರದಾ ಪೂರ್ಯಾನಾಯ್ಕರ ಪ್ರಯತ್ನದಿಂದ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಹೊಳೆಹೊನ್ನೂರು ಪಟ್ಟಣಪಂಚಾಯ್ತಿಯಾಗಿ ಪರಿವರ್ತನೆಯಾಗಿದ್ದು, ಇಂತಹ ಬದಲಾವಣೆಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.