ಶಿವಮೊಗ್ಗದ ಸೀನಪ್ಪಶೆಟ್ಟಿ ಸರ್ಕಲ್ ಬಳಿ ಇರುವ ನಾನ್ವೆಜ್ಪುಡ್ಕೋರ್ಟ್ನಲ್ಲಿ ಮಹಿಳಾ ವ್ಯಾಪಾರಿ ಮತ್ತು ಆಕೆಯಅಂಗಡಿಯ ಹುಡುಗನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಹಾಕಲಾಗಿದೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಈಘಟನೆ ನಡೆದಿದೆ. ಘಟನೆಯಲ್ಲಿ ಬಿಸಿ ನಾನ್ವೆಜ್ ಪಾತ್ರೆಗಳನ್ನುಬಳಸಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು

ಎಫ್ಐಆರ್ದಾಖಲಾಆಗಿದೆ.ವ್ಯಾಪಾರದ ವಿಚಾರವಾಗಿ ಹಲ್ಲೆ ನಡೆದಿದೆ. ನಗರದ ಪೆನ್ಷನ್ಮೊಹಲ್ಲಾ ನಿವಾಸಿಯಾಗಿರುವ ಮಹಿಳೆಯೊಬ್ಬರು ಇಲ್ಲಿವ್ಯಾಪಾರ ನಡೆಸ್ತಿದ್ದಾರೆ. ಇವರ ಅಂಗಡಿಯ ಪಕ್ಕದಲ್ಲಿರುವಇನ್ನೊಂದು ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ. ೧೦ ರಿಂದ ೧೨ವರ್ಷಗಳಿಂದ ವ್ಯಾಪಾರ ನಡೆಸ್ತಿರುವ ಮಹಿಳೆಯ ವ್ಯಾಪಾರಕ್ಕೆಅಡ್ಡಿ ಬಂದು ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.ಎಂದಿನಂತೆ ವ್ಯಾಪಾರ ಮಾಡುತ್ತಿದ್ದ ದೂರುದಾರ ಮಹಿಳೆತಮ್ಮ ವ್ಯಾಪಾರಕ್ಕೆ ಏಕೆ ತೊಂದರೆ ಕೊಡುತ್ತೀರಾ ಎಂದುಕೇಳಿದ್ದಕ್ಕೆ ಪಕ್ಕದ ಅಂಗಡಿಯ ಯುವಕ ಮಹಿಳೆಯ

ಅಂಗಡಿಯಲ್ಲಿದ್ದ ನಾನ್ವೆಜ್ ಪಾತ್ರಗಳಿಂದ ಹಲ್ಲೆ ಮಾಡಿದ್ದಾನೆ.ಹೊಡೆಯುತ್ತೇನೆ ಎಂದು ಅಂಗಡಿಯ ಹುಡುಗನ ಮೇಲೆಹಲ್ಲೆ ಮಾಡಿದ್ದಾನೆ. ದೂರಿನ ಪ್ರಕಾರ, ಪ್ರತಿನಿತ್ಯ ಪಕ್ಕದಅಂಗಡಿಯವರು ವ್ಯಾಪಾರಕ್ಕಾಗಿ ತೊಂದರೆ ಕೊಡುತ್ತಿದ್ದರಂತೆ.ಅಲ್ಲದೆ ಅಂಗಡಿಯ ಕೆಲಸಕ್ಕೆ ಬರುವ ಹುಡುಗರಿಗೆ ಕೆಲಸಕ್ಕೆಬರದಂತೆ ಬೆದರಿಕೆ ಹಾಕುತ್ತಿದ್ದರಂತೆ. ಇದೇ ವಿಷಯಕ್ಕೆಗಲಾಟೆಯಾಗಿದ್ದು, ಮಹಿಳೆಗೆ ಜೀವ ಬೆದರಿಕೆ ಸಹ ಹಾಕಲಾಗಿದೆ.ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರುಎಫ್ಐಆರ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.