
ಶಿವಮೊಗ್ಗ: ನಗರದ ಡಿಎಆರ್ ಹೆಡ್ ಕಾನ್ಸ್ಟೇಬಲ್ ನಂದೀಶ್.ಟಿ.ಹೆಚ್ ಅವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಸೇವೆ ಹಾಗೂ ಯೋಗ

ಮತ್ತು ಕ್ರೀಡಾ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2024-25 ನೇ ಸಾಲಿನ ಮುಖ್ಯಮಂತ್ರಿಗಳ ಸ್ವರ್ಣ ಪದಕ ನೀಡಿ ಪುರಸ್ಕರಿಸಿದೆ.


ಏಪ್ರಿಲ್ 02 ರಂದು ಬೆಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸ್ವರ್ಣ ಪದಕ ನೀಡಿ ಅಭಿನಂದಿಸಿದರು.

ದುರ್ಗಿಗುಡಿಯ ನಿವಾಸಿಗಳಾದ ಇವರು ಕಳೆದ 27 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.