
ಬೆಂಗಳೂರು : ಸಿದ್ದರಾಮಯ್ಯನವರು 1 ಲಕ್ಷದ 16 ಕೋಟಿ ಸಾಲವನ್ನು ಮಾಡಿದ್ದಾರೆ. ಶೇಕಡ 46% ರಷ್ಟು ಸಾಲವನ್ನ ಜಾಸ್ತಿ ಮಾಡಿದ ಕೀರ್ತಿ ಯಾರಿಗಿದೆ ಎಂದರೆ 16 ಸಲ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರಿಗೆ ಸೇರುತ್ತೆ. ಕಾಂಗ್ರೆಸ್ ಸರ್ಕಾರದ ಮೊದಲನೇ ಗ್ಯಾರಂಟಿ ಸಾಲದ ಗ್ಯಾರಂಟಿ, ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರೆಂಟಿ ಅದು ಮುಸ್ಲಿಂ ಗ್ಯಾರಂಟಿ, ಮೂರನೇ ಗ್ಯಾರಂಟಿ ಅದು ಬೆಲೆ ಏರಿಕೆಯ ಗ್ಯಾರಂಟಿ, ನಾಲ್ಕನೇ ಗ್ಯಾರಂಟೀ ಯಾವುದು ಅಂದರೆ ಬಡವರ ಜಮೀನು, ಮನೆ, ಮಠಗಳನ್ನು ನುಂಗುವ ಗ್ಯಾರಂಟೀ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ನೀತಿ ವಿರೋಧಿಸಿ ಭಾರತೀಯ ಜನತಾ ಪಕ್ಷದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವುದಲ್ಲದೆ ತನ್ನ ಖಾಲಿಯಾದ ಬೊಕ್ಕಸವನ್ನು ತುಂಬಿಸಿಕೊಳ್ಳಲು ಒಂದಿಲ್ಲೊಂದು ದರ ಏರಿಕೆಯನ್ನು ಮಾಡುತ್ತಾ ಜನರ ಕಷ್ಟಗಳ ಬಗ್ಗೆ ಕಿಂಚಿತ್ ಪರಿಗಣನೆಯಿಲ್ಲದೆ ದರ ಏರಿಕೆಯನ್ನು ಮಾಡುತ್ತಿದೆ. ಸಿದ್ದರಾಮಯ್ಯನವರ ನೇತೃತವದ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿ ಯಾವ್ದು ಅಂದ್ರೆ ಅದು ಸಾಲದ ಗ್ಯಾರಂಟಿ.

ಸಿದ್ದರಾಮಯ್ಯನವರ ಭಾಷೆಯಲ್ಲಿ ಹೇಳಬೇಕಾದರೆ ಮಹದೇವಪ್ಪ ನಿನಗೂ ಒಂದು ಲಕ್ಷ ಸಾಲ, ಕಾಕ ಪಾಟೀಲ್ ನಿನಗೂ ಒಂದು ಲಕ್ಷ ಸಾಲ, ರಾಜ್ಯದಲ್ಲಿ ಹುಟ್ಟಿದ ಮಗುವಿಗೂ ಕೂಡ ಒಂದು ಲಕ್ಷ ಸಾಲವನ್ನು ಹೊರಿಸುತ್ತಿದ್ದಾರೆ ಕಾಂಗ್ರೆಸ್ ಸರ್ಕಾರ ಇವರ ಗ್ಯಾರಂಟೀ ಅಂದರೆ ಒಂದು ಕೈ ಅಲ್ಲಿ ಕೊಟ್ಟು ಹತ್ತು ಕೈ ಅಲ್ಲಿ ಕಿತ್ತುಕೊಳ್ಳುವುದು. ರಾಜ್ಯದ ಜನತೆಗೆ ಗಣಪತಿ ಹಬ್ಬಕ್ಕೆ ವಾಲ್ಮೀಕಿ ನಿಗಮದ ಹಗರಣ ಗ್ಯಾರಂಟೀ ಕೊಟ್ರು,

ದೀಪಾವಳಿ ಹಬ್ಬಕ್ಕೆ ವಕ್ಭ್ ಗ್ಯಾರಂಟೀ, ಸಂಕ್ರಾಂತಿ ಹಬ್ಬಕ್ಕೆ ಮೂಡ ಹಗರಣ ಗ್ಯಾರಂಟೀ , ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಗ್ಯಾರಂಟೀ, ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಇವತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರಿಗೆ 82 ವರ್ಷ ವಯಸ್ಸಾದರೂ ಮಧ್ಯರಾತ್ರಿ ಎದ್ದೇಳಿಸಿ ಕೇಳಿದರೂ ಯಾವ ಜಿಲ್ಲೆಯಲ್ಲಿ, ಯಾವ ಊರಿನಲ್ಲಿ ಅಭಿವೃದ್ಧಿ ಆಗ್ತಾ ಇದೆ. ಎಲ್ಲಿ ಅಭಿವೃದ್ಧಿ ಕುಂಠಿತ ಆಗ್ತಾ ಇದೆ ಅನ್ನೋದನ್ನ ಯೋಚನೆ ಮಾಡ್ತಾ ಇರುತ್ತಾರೆ. ಆದ್ರೆ ಸಿದ್ದರಾಮಯ್ಯನವರಿಗೆ, ಡಿ.ಕೆ ಶಿವಕುಮಾರ್ ಅವರಿಗೆ, ಕಾಂಗ್ರೆಸ್ ಮಂತ್ರಿಗಳಿಗೆ, ಎಂ.ಎಲ್.ಎ ಗಳಿಗೆ ಮಧ್ಯರಾತ್ರಿ ಎಬ್ಬಿಸಿ ಕೇಳಿದರೆ ಗ್ಯಾರಂಟೀ ಗ್ಯಾರಂಟೀ ಅಂತ ಕನವರಿಸುತ್ತಿರುತ್ತಾರೆ ಎಂದು ಹೇಳಿದರು.