
ಶಿವಮೊಗ್ಗ,ಮಾ.,14 : ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಇವರ ವತಿಯಿಂದ ಸೋಮಿನಕೊಪ್ಪ ರಸ್ತೆಯಲ್ಲಿರುವ ಸರ್ಜಿ ಇನ್ಸ್ಟಿಟ್ಯೂಟ್ ಫಾರ್ ಸ್ಪೆಷಲ್ ಚಿಲ್ಡ್ರನ್ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಲಭ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದಾದ ಯು.ಡಿ.ಐ.ಡಿ ಕಾರ್ಡ್ ಅನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲಾಗುತ್ತದೆ.

ಶನಿವಾರ 15 ಮಾರ್ಚ್ 2025ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾಲಾವಕಾಶವಿದ್ದು, ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಸಾರ್ವಜನಿಕರು ಒಂದು ಪಾಸ್ ಪೋರ್ಟ್ ಅಳತೆಯ ಫೋಟೋ, ಒರಿಜಿನಲ್ ಆಧಾರ್ ಕಾರ್ಡ್ ಜೊತೆಗೆ ಬರಬಹುದು.

ಬರಲಾಗದ ವಿಶೇಷ ಚೇತನರಿದ್ದಲ್ಲಿ ಮನೆಯಲ್ಲಿ ಇರುವ ಒಬ್ಬರು ಪೋಷಕರು ಮಕ್ಕಳ ಸಹಿ ಅಥವಾ ಹೆಬ್ಬರಳಿನ ಗುರುತನ್ನು ಬಿಳಿಹಾಳೆಯ ಮೇಲೆ ಹಾಕಿಸಿ ದಾಖಲೆಗಳ ಜೊತೆ ಆಗಮಿಸಿ ಅರ್ಜಿ ಸಲ್ಲಿಕೆ ಮಾಡಬಹುದು.

ಯುಡಿಐಡಿ ಕಾರ್ಡ್ ನಿಂದ ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಯೋಜನೆಗಳಾದ ರೈಲ್ವೇ ಪಾಸ್, ಬಸ್ ಪಾಸ್, ಪಿಂಚಣಿ ಯೋಜನೆಗಳು, ವಿಮಾ ಯೋಜನೆ, ಉಚಿತ ವೈದ್ಯಕೀಯ ಉಪಕರಣಗಳ ವಿತರಣಾಯೋಜನೆಗಳು ಸೇರಿದಂತೆ ಹಲವಾರು ಸೌಲಭ್ಯಗಳನ್ನು

ಪಡೆಕೊಳ್ಳಬಹುದಾಗಿದ್ದು ಬರುವವರು ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ : 7829738412 ಅಥವಾ ನೇರವಾಗಿ ಸರ್ಜಿ ಇನ್ಸ್ಟಿಟ್ಯೂಟ್ ಫಾರ್ ಸ್ಪೆಷಲ್ ಚಿಲ್ಡ್ರನ್ ಸಂಸ್ಥೆ , ಸೋಮಿನಕೊಪ್ಪ ರಸ್ತೆ, ಪಿ ಅಂಡ್ ಟಿ ಕಾಲೋನಿ ಬಸ್ ಸ್ಟಾಂಡ್ ಮುಂಭಾಗ, ಪೊಲೀಸ್ ಚೌಕಿ ವಿನೋಬನಗರ ಶಿವಮೊಗ್ಗ ಇಲ್ಲಿಗೆ ಭೇಟಿ ನೀಡಬಹುದು.