
ಸಾಗರ : ಪಟ್ಟಣದ ಬಸವನಹೊಳೆ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ ಮದ್ಯವನ್ನು ಅಬ್ಕಾರಿ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಅಬ್ಕಾರಿ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡಲು ಅವಕಾಶ ಇಲ್ಲದ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಇರುವ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದರ ಕುರಿತು ಖಚಿತ ಮಾಹಿತಿ ಲಭಿಸಿದೆ.

ಕಾಗೋಡು ತಿಮ್ಮಪ್ಪ ಬಡವಾಣೆ ಹತ್ತಿರ ಅಕ್ರಮ ಮದ್ಯವನ್ನು ಪ್ರಮೋದ್ ವಿಶ್ವನಾಥ್ ಜುವೇಂಕರ್ ಬಇನ್ ವಿಶ್ವನಾಥ್ ರಾಗೋಬ್ ಜುವೇಂಕರ್ ಎಂಬುವವರು ಮಾರುತಿ ಕಾರಿನಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು.

ದಾಳಿಯಲ್ಲಿ ಒಟ್ಟು ೧೩೮.೦೬ ಲೀಟರ್ ಗೋವಾ ಮದ್ಯವನ್ನು ವಾಹನ ಸಮೇತ ವಶಕ್ಕೆ ಪಡೆಯಲಾಗಿದ್ದು, ಕರ್ನಾಟಕ ಅಬ್ಕಾರಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಅಬ್ಕಾರಿ ಉಪ ಅಧೀಕ್ಷಕಿ ಶೀಲಾ ದಾರಾಜಕರ, ಅಬ್ಕಾರಿ ನಿರೀಕ್ಷಕಿ ಭಾಗ್ಯಲಕ್ಷ್ಮೀ, ಸಿಬ್ಬಂದಿಗಳಾದ ಗುರುಮೂರ್ತಿ, ದೀಪಕ್, ಸಚಿನ್ ಪಾಲ್ಗೊಂಡಿದ್ದರು.