
ಬೆಂಗಳೂರು, ಮಾ.14:
ಇಂದು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ಅವರು ಭದ್ರಾವತಿಯ ಭದ್ರಾ ಸೇತುವೆಯಿಂದ ಮೊದಲುಗೊಂಡು ಕೂಡಲಿವರೆಗೂ ಅಕ್ರಮವಾಗಿ ಮರಳು ಸಂಗ್ರಹಿಸುವ

ಕಾರ್ಯ ನಡೆಯುತ್ತಿದ್ದು, ಅನಧಿಕೃತವಾಗಿ ಜೆಸಿಬಿ ಹಿಟಾಚಿಗಳ ಸದ್ದು ಮಾಡುತ್ತಿರುವ ಬಗ್ಗೆ, ಹಗಲು ರಾತ್ರಿ ಪಾಳಿಯಂತೆ ಇಸ್ಪೀಟ್ ಆಡಿಸುವ

ದಂಧೆ, ಓಸಿ(ಮಟ್ಕಾ), ಗಾಂಜಾ, ಮೀಟರ್ ಬಡ್ಡಿ ವಹಿವಾಟು ಮತ್ತು ಅರಣ್ಯ ಒತ್ತುವರಿ ಕಾರ್ಯದಿಂದ ಶಿವಮೊಗ್ಗ ಜಿಲ್ಲೆಯು ನಲುಗಿದ್ದು ಇಂತಹ ಅಕ್ರಮ ಚಟುವಟಿಕೆಗಳಿಂದ ಹಾಗೂ ಅಕ್ರಮ ಹಣದಿಂದ ಸಮಾಜಘಾತಕ ಶಕ್ತಿಗಳು ಒಂದಾಗಿ ಶಿವಮೊಗ್ಗ ಜಿಲ್ಲೆಯ ಹೆಸರಿಗೆ ಚ್ಯುತಿ

ಬರಬಹುದೆಂಬ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಸರ್ಕಾರ ಈ ವಿಚಾರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ತಮ್ಮ ನಿಷ್ಠೆಯನ್ನು ಮಾರಿಕೊಂಡಿರುವ ಕೆಲ ಪೊಲೀಸರ ವಿರುದ್ಧ ಕ್ರಮಕೈಗೊಂಡು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕ್ರಮವಹಿಸಲು ಗೃಹ ಸಚಿವರು ತಮ್ಮ ಇಲಾಖೆಯವರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.