ಶಿವಮೊಗ್ಗ; ಬಿಪಿಎಲ್ ಕುಟುಂಬಗಳಿಗೆ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಹಾಗೂ ಇನ್ನಿತರ ಅನೇಕ ಸೌಲಭ್ಯಗಳನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ಸಂಪುಟದಲ್ಲಿ ತೀರ್ಮಾನಿಸಿ ಎರಡು ತಿಂಗಳು ಕಳೆದರೂ ಈತನಕ ಸರ್ಕಾರಿ ಆದೇಶ ಹೊರಡಿಸದೇ ಬಡವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಕಪ್ಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಂಗಾಂಗ ಕಸಿ ಯೋಜನೆಯಡಿಯಲ್ಲಿ ಕ್ಯಾನ್ಸರ್, ಹೃದಯ, ಶ್ವಾಸಕೋಶ, ಮತ್ತು ಮೂಳೆ ಮಜ್ಜೆಯ ಕಸಿಯನ್ನು ಸೇರಿಸಿ ಅಸ್ತಿತ್ವದಲ್ಲಿರುವ ಯೋಜನೆಯನ್ನು ವಿಸ್ತರಿಸುವುದಾಗಿ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಬಿಪಿಎಲ್ ಕಾರ್ಡ್ದಾರರಿಗೆ ಕಸಿ ವಿಧಾನದ ದರಗಳಂತೆ ಇಮ್ಯುನೋಫ್ರೆಷನ್ ಔಷಧ ಕೊಡಲು ಮತ್ತು ಅಟೋಲೋಗಸ್ ಮೂಳೆಮಜ್ಜೆಯ ಕಸಿ ಕೈಗೊಳ್ಳಲು ಸಹ ಒಪ್ಪಿಗೆ ನೀಡಿದ್ದು, ಈ ಸಂಬಂಧ ಸರ್ಕಾರ ಇನ್ನೂ ಸುತ್ತೋಲೆ ಹೊರಡಿಸದೇ ಇರುವುದನ್ನು ಸಂಘಟನೆ ಖಂಡಿಸುತ್ತದೆ ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಅಸ್ಥಿಮಜ್ಜೆಯ ಕಸಿಯನ್ನು ಸೇರ್ಪಡೆಗೊಳಿಸಿ ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ ಕೊಡುವುದಾಗಿ ಪ್ರಕಟಿಸಿ ೨ ತಿಂಗಳಾಗಿದೆ. ಕಳೆದ ಎರಡು ವರ್ಷಗಳಿಂದ ಅಗತ್ಯವಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸದಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳಿಗೆ ಅರ್ಜಿಗಳನ್ನು ಕರೆಯದೇ ಕಾರ್ಡ್ಗಳನ್ನು ವಿತರಿಸದೇ ಇರುವುದರಿಂದ ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಮತ್ತು ಎಂಆರ್ಐ ಹಾಗೂ ಸಿಟಿ ಸ್ಕ್ಯಾನ್ ಸೌಲಭ್ಯ ಉಚಿತವಾಗಿ ಪಡೆಯಲು ಬಡ ಮತ್ತು ಮಧ್ಯಮ ವರ್ಗಕ್ಕೆ ಸಾಧ್ಯವಾಗುತ್ತಿಲ್ಲ. ಉಚಿತ ಕಣ್ಣಿನ ತಪಾಸಣೆ ಕೂಡ ಮಾಡುತ್ತಿಲ್ಲ. ಈ ಎಲ್ಲಾ ಯೋಜನೆಗಳ ಜಾರಿ ವಿಳಂಬದ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಟ್ರಸ್ಟ್ ಖಂಡಿಸುತ್ತಿದ್ದು, ಕೂಡಲೇ ಜಾರಿಗೊಳಿಸಲು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಮತ್ತು ಪ್ರಮುಖರಾದ ಡಾ. ಷಣ್ಮುಖಪ್ಪ, ಪ್ರೊ. ಕಲ್ಲನ, ಹೆಚ್.ಎಂ. ಸಂಗಯ್ಯ, ಎಸ್.ಪಿ. ಶಿವಣ್ಣ, ಟಿ.ಹೆಚ್. ಬಾಬು, ಶಂಕ್ರಾನಾಯ್ಕ್, ಸೋಮಶೇಖರಯ್ಯ, ಕೃಷ್ಣನ್, ಪ್ರೇಮ್, ವೇದಾನಂದ್ ಇದ್ದರು.