
ಸೊರಬ ಆನವಟ್ಟಿಯ ಕುಬಟೂರು ಗ್ರಾಮದ ಚೆಲುವ ನಗರದಲ್ಲಿ ಕುಡಿಯುವ ನೀರನ ಅಭಾವದಿಂದ ಉಂಟಾದ ಸಮಸ್ಯೆಯಿಂದಾಗಿ ಈ ಗ್ರಾಮದ ಜನರು ನೀರಿಗಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್, ಮಧು ಬಂಗಾರಪ್ಪನವರನ್ನು ಭೇಟಿ ಮಾಡಿ ಕುಡಿಯುವ ನೀರಿಗೆ ಕೊರತೆ

ಇರುವುದರಿಂದ ಈ ಭಾಗದಲ್ಲಿ ಒಂದು ಬೋರ್ವೆಲ್ ಕೊರೆದು ನಮ್ಮ ನೀರಿನ ಸಮಸ್ಯೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದರು, ಗ್ರಾಮಸ್ಥರ ಮನವಿಗೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಇಂದು ಕುಬಟೂರು ಗ್ರಾಮದ ಚೆಲುವ ನಗರದಲ್ಲಿ ತಮ್ಮ ವೈಯಕ್ತಿಕ ಸಹಾಯದಿಂದ

ಬೋರ್ವೆಲ್ ಕೊರೆಸಿ ಗ್ರಾಮದ ಬಹುದಿನ ಬೇಡಿಕೆಗೆ ಸ್ಪಂದಿಸಿದರು, ಸುಮಾರು 5 ಇಂಚ್ ನೀರು ಹೊರ ಬಂದಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಮಾನ್ಯ ಸಚಿವ ಮಧು ಬಂಗಾರಪ್ಪನವರ ಸಮಾಜಮುಖಿ ಕಾರ್ಯವನ್ನು ಸ್ಮರಿಸಿ ಅಭಿನಂದಿಸಿದರು .