
ಶಿವಮೊಗ್ಗ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದ ಮೇರೆಗೆ ಮಾ.೮ ರಂದು ಈ ವ?ದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ವ?ದಲ್ಲಿ ೪ ಮೆಗಾ ಲೋಕ್ ಅದಾಲತ್ ಗಳನ್ನು ನಡೆಸುತ್ತೇವೆ. ಇದು ವ?ದ ಮೊದಲ ಲೋಕ್ ಅದಾಲತ್ ಇದಾಗಿದ್ದು, ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ಸೇರಿದಂತೆ ಇತರೆ ೬ ತಾಲ್ಲೂಕುಗಳಲ್ಲಿ ಲೋಕ್ ಅದಾಲತ್ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಈಗಾಗಲೇ ನಡೆಸಿದ್ದೇವೆ ಎಂದರು.

ಕಳೆದ ಡಿಸೆಂಬರ್ ನಲ್ಲಿ ರಾಜಿ ಸಂಧಾನದ ಮೂಲಕ ೧೩೩೦೦ ರ? ಪ್ರಕರಣವನ್ನು ಬಗೆಹರಿಸಿದ್ದೇವೆ. ಈ ಬಾರಿ ನಡೆಯುವ ಲೋಕ್ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್ ವೈವಾಹಿಕ ಮೋಟಾರು ಪರಿಹಾರ ಪ್ರಕರಣಗಳು ಸೇರಿದಂತೆ ಇತರ ೧೫ ಸಾವಿರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಪರಿಹರಿಸಬೇಕೆಂದಿದ್ದೇವೆ ಎಂದರು.
ಈ ಬಾರಿ ಲೋಕ್ ಅದಾಲತ್ ನಲ್ಲಿ ಕ್ರಿಮಿನಲ್ ಪ್ರಕರಣಗಳೇ ಹೆಚ್ಚು. ಈ ಬಾರಿಯ ಲೋಕ್ ಅದಾಲತ್ ನಲ್ಲಿ ೧೫ ರಿಂದ ೨೦ ವ?ದ ಹಳೆಯ ಕೇಸ್ ಗಳು ಬಗೆಹರಿಯಲಿದ್ದು, ಇದರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸ್ಗಳಿವೆ. ಈ ಸಂದರ್ಭದಲ್ಲಿ ಕೋರ್ಟ್ ಮಧ್ಯಸ್ಥಿಕೆ ವಹಿಸುವ ಮೂಲಕ ಕುಟುಂಬ ವ್ಯಾಜ್ಯಗಳು ಸೇರಿದಂತೆ ಇನ್ನಿತರೆ ಕೇಸ್ಗಳನ್ನು ಬಗೆಹರಿಸುತ್ತೇವೆ. ಈ ಲೋಕ್ ಅದಾಲತ್ ನಡೆಸುವುದರಿಂದ ನಾವು ನ್ಯಾಯಾಲಯದ ಸಮಯವನ್ನು ಉಳಿಸಬಹುದು. ಮೂರು ಕೋರ್ಟ್ಗಳಲ್ಲಿ ನಡೆಯುವ ಕಲಾಪ ಲೈವ್ ಸ್ಟ್ರೀಮಿಂಗ್ ಬಿಡಲಾಗುತ್ತದೆ ಎಂದರು.

ಪ್ರಮುಖವಾಗಿ ಈ ಅದಾಲತ್ ನಲ್ಲಿ ಪತಿ -ಪತ್ನಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ದಂಪತಿಗಳನ್ನು ಒಟ್ಟಾಗಿ ಇರಲು ಪ್ರೇರೇಪಿಸಲಾಗುವುದು ಹಾಗೂ ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ಬಗೆಹರಿಯಬಹುದಾದ ಕೇಸ್ ಗಳನ್ನು ಕೂಡ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲಾಗುವುದು. ಲೋಕ್ ಅದಾಲತ್ ಎನ್ನುವುದು ಕೇವಲ ವ್ಯಾಜ್ಯಗಳನ್ನು ಬಗೆಹರಿಸುವುದಷ್ಟೇ ಅಲ್ಲ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದೇ ಆಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು ೫೫ ಸಾವಿರ ಪ್ರಕರಣಗಳು ಬಾಕಿ ಇದ್ದು, ಈ ಲೋಕ್ ಅದಾಲತ್ ನಲ್ಲಿ ೧೩೮೦೦ರಿಂದ ೧೪ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ ಎಂದರು.
ಮಾ.೮ ರಂದು ಮಹಿಳಾ ದಿನಾಚರಣೆ ಆಗಿರುವುದರಿಂದ ಕಲಾಪಗಳ ಸಂಧಾನವನ್ನು ಮಾಡಿಸಲು ೩೮ ಮಹಿಳಾ ವಕೀಲರನ್ನೇ ಸಂಧಾನಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಹಾಗೆಯೇ ಇಲ್ಲಿರುವ ಮಹಿಳಾ ಕೇಸ್ಗಳ ಬಗ್ಗೆ ಎಂದಿನಂತೆ ಸೂಕ್ಷ್ಮವಾಗಿ ಗಮನಹರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರಾದ ಸಂತೋ?.ಎಂ.ಎಸ್ ಉಪಸ್ಥಿತರಿದ್ದರು.