
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ-35
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)



ಈ ಜಗತ್ತಿನಲ್ಲಿ ಅಧಿಕಾರ, ಗೌರವ, ಹಣ ಅಂತಸ್ತು, ರಾಜ ಮರ್ವಾದೆ, ಪ್ರಶಸ್ತಿಗಳು ಸಿಗಬೇಕೆಂದರೆ ಬಕೆಟ್ ಹಿಡಿಯಬೇಕು, ಇಲ್ಲವೇ ಚಮಚಾಗಿರಿ ಮಾಡಬೇಕು ಎನ್ನುವ ಮಾತು ಸಾರ್ವಜನಿಕವಾಗಿ ಎಲ್ಲೆಡೆ ಕೇಳಿ ಬರುತ್ತಿದೆ. ಹಾಗೆಂದ ಮಾತ್ರಕ್ಕೆ ಗೌರವ, ರಾಜಮರ್ವಾದ ಅಂತಹವರಿಗೆ ಮಾತ್ರ ಸಿಗುವುದಿಲ್ಲ ನಿಜಕ್ಕೂ ಪ್ರತಿಭಾನ್ವಿತರಿಗೆ, ಗೌರವಾನ್ವಿತರಿಗೆ ಅದರಲ್ಲೂ ಕೆಲವರಿಗೆ ಮಾತ್ರ ಬೆರಳೆಣಿಕೆಯ ಸಾಧನೆಯಲ್ಲಿ ಗೌರವ ಪ್ರಶಸ್ತಿ ಸಿಗುತ್ತವೆ.
ಇಂತಹವರನ್ನು ಹೊರತುಪಡಿಸಿ ಬಹಳಷ್ಟು ಕಡೆ ಬಕೆಟ್ ಹಿಡಿಯುವವರೇ ಹೀರೋಗಳಾಗುತ್ತಿರುವುದು, ಗೌರವ ಪಡೆಯುತ್ತಿರುವುದು ನಮ್ಮ ಸಮಾಜದ ಅತ್ಯಂತ ದೊಡ್ಡ ದುರಂತವೇ ಹೌದು. ಇದು ಸಿಗುವ ಗೌರವಕ್ಕೆ,ದೊರೆಯುವ ಪ್ರಶಸ್ತಿಗೆ ಇದ್ದ ಬೆಲೆಯನ್ನು ಮೂರು ಕಾಸಿಗೆ ಹರಾಜು ಹಾಕಿದಂತಹ ವಾತಾವರಣ ನಮ್ಮ ನಡುವೆ ನಿರಂತರವಾಗಿ ಕಾಣುತ್ತಿದೆಯಲ್ಲವೇ? ಇಂತಹ ಮಾತುಗಳ ನಡುವೆ ಗುಲಾಮಗಿರಿ, ಬಕೆಟ್ ಹಿಡಿಯುವುದು ಮತ್ತು ಚಮಚಾಗಿರಿ ಮಾಡುವುದರಿಂದ ರಾಜಮರ್ಯಾದೆಯನ್ನು ಪಡೆಯಬಹುದು ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ವಿಷಯ.






ಇಂತಹ ನಾವು ಹತ್ತಾರು ವಿಷಯಗಳನ್ನ ಅವಲೋಕಿಸಿದ್ದೇವೆ. ಎಲ್ಲೆಡೆ ಒಂದು ಪ್ರತಿಭೆಗಿಂತ ಇನ್ನೊಂದು ಪ್ರಬುದ್ಧ ಪ್ರತಿಭೆ ಸವಾಲ್ ಹಾಕುವಂತೆ ಬೆಳೆದಿರುತ್ತದೆ. ಇಲ್ಲಿ ಗೌರವಕ್ಕೆ ಹುಡುಕುವಾಗ ನಿಜಕ್ಕೂ ನೈಜ ಮನಸ್ಥಿತಿಯ ಆಯ್ಕೆದಾರದಿದ್ದರೆ ಅವರಿಗೆ ಆಯ್ಕೆ ಒಂದು ಸವಾಲಾಗುತ್ತದೆ.
ಆದರೆ ಈ ಸವಾಲುಗಳ ನಡುವೆ ಇನ್ನಿಲ್ಲದ ಶಿಫಾರಸ್ಸು, ಇನ್ನಿಲ್ಲದ ಕಮಿಷನ್ ವ್ಯವಹಾರ, ಇನ್ನಿಲ್ಲದ ಚಮಚಾಗಿರಿ, ಇನ್ನಿಲ್ಲದ ಗುಲಾಮತನ ಇಂತಹ ಪ್ರಶಸ್ತಿಗಳನ್ನು, ಗೌರವಗಳನ್ನು ನಮ್ಮ ನಡುವೆ ಸಾಕಷ್ಟು ಕಡೆ ಸಿಗುವಂತೆ ಮಾಡಿದೆ ಎಂಬುದು ಒಟ್ಟಾರೆ ಸಾರ್ವಜನಿಕ ಅಭಿಪ್ರಾಯ.
ಹಾಗಾಗಿ ನಿಜಕ್ಕೂ ಬಹುಮಾನ ಪಡೆದವನು, ಗೌರವಕ್ಕೆ ಪುರಸ್ಕೃತನಾದವನು ಸಹ ಅನುಮಾನದ ದೃಷ್ಟಿಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ನಿಜವಾಗಿಯೂ ನಮ್ಮ ನಡುವಿನ ನಾಚಿಕೆಗೇಡಿನ ದುರಂತದ ಸಂಗತಿಯೇ ಹೌದು.

ಒಂದೊಂದು ಗೌರವಕ್ಕೆ ಒಂದೊಂದು ಮಾನದಂಡವನ್ನು ನಿಗದಿಪಡಿಸಿಕೊಳ್ಳಲಾಗಿದೆ. ಆ ಮಾನದಂಡಗಳೇ ಕೆಲವೊಮ್ಮೆ ಉಲ್ಟಾ ಹೊಡೆದಿರುತ್ತವೆ. ಎಷ್ಟೋ ಜನರಿಗೆ ತಾನು ಪಡೆದ ಗೌರವ ಯಾವುದು ಎಂಬುದೇ ಗೊತ್ತಿರುವುದಿಲ್ಲ. ಇಂತಹ ಗೌರವ ಪಡೆಯಲು ಸುಮಾರು ದಿನಗಳಿಂದ ಅಣ್ಣ ಅಪ್ಪ ಎನ್ನುತ್ತಾ, ಕೈಕಾಲು ಒತ್ತುವ ಕಾಲಿಗೆ ಬೀಳುವ, ಬೇಕಿದ್ದರೆ ಒಂದಿಷ್ಟು ಎಣ್ಣೆ ಬಾಡೂಟವನ್ನು ಕೊಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದು ಪ್ರಶಸ್ತಿಯ ನಿಜವಾದ ಗೌರವವನ್ನು ಆ ಪ್ರಶಸ್ತಿ ಹೆಸರಿನ ವ್ಯಕ್ತಿಯ ವ್ಯಕ್ತಿತ್ವವನ್ನು ಅನುಮಾನಿಸುವಂತೆ, ಗೌರವಿಸದಂತೆ ಮಾಡುತ್ತದೆ ಎಂಬುದು ಒಟ್ಟಾರೆಯಾದ ಅಭಿಪ್ರಾಯ.
ನಿಜಕ್ಕೂ ನಾವು ಒಂದು ಗೌರವಕ್ಕೆ ಪಾತ್ರವಾದರೆ ಆ ಗೌರವವನ್ನು ಪಡೆಯಲು ನಾವು ಅಷ್ಟರಮಟ್ಟಿಗೆ ಪ್ರಬುದ್ಧರಾಗಿದ್ದೇವಾ? ಅಷ್ಟು ಪ್ರಮಾಣದ ಸಾಧನೆ ಅಥವಾ ಸಾಧಕತನವನ್ನು ಮಾಡಿದ್ದೇವೆಯೇ ಎಂಬ ಪ್ರಶ್ನೆಯನ್ನು ನೈಜ ಹಾಗೂ ನಿಜವಾದ ಪ್ರತಿಭೆಗೆ ನನ್ನನ್ನು ತಾನು ಕೇಳಿಕೊಳ್ಳಬೇಕಾಗಿರುವುದು ಈ ಜಗತ್ತಿನ ಅದೆಷ್ಟು ದೊಡ್ಡ ಆತಂಕದ ವಿಷಯವಲ್ಲವೇ?
ಗೌರವವನ್ನು, ಸಾಧನೆ ನೋಡಿ ಗುರುತಿಸಿ ಕೊಡುವುದು ಒಂದು ಕಡೆ ವಾಡಿಕೆಯಾದರೆ ಇದು ನಿಜಕ್ಕೂ ಅರ್ಥಗರ್ಭಿತ. ನೀನು ಏನನ್ನೂ ಸಾಧನೆ ಮಾಡಿದ್ದೀಯಾ? ನೀನು ಈ ಪ್ರಶಸ್ತಿಗೆ ಅರಾಮಾಗಿದ್ದರೆ ಅರ್ಜಿ ಹಾಕು ಎಂದು ಕೇಳುವ ಮತ್ತೊಂದು ಬಗೆಯ ವ್ಯವಸ್ಥೆ ನಮ್ಮ ನಡುವೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ಆಯ್ಕೆ ಸಮಿತಿಯೇ ಬಹಳಷ್ಟು ಕಡೆ ನಾನಾ ಅನುಮಾನಗಳ, ಪ್ರಶ್ನೆಗಳ ಗುರಿಗೆ ಪಾತ್ರವಾಗುತ್ತಿರುವುದು. ಈಗಿನ ನೈಜ ಸತ್ಯದ ಸಂಗತಿಯಲ್ಲವೇ?

ಸಾಧಕ ಒಂದು ಸಾಧನೆ ಮಾಡಿರಬಹುದು ಆದರೆ ಇಂತಹ ಸಾಧಕನನ್ನು ಗುರುತಿಸಿ ಆಯ್ಕೆ ಮಾಡಬೇಕಾದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಎಷ್ಟರಮಟ್ಟಿಗೆ ಪಾರದರ್ಶಕವಾಗಿ ಬಳಸಿಕೊಳ್ಳುತ್ತಾನೆ ಎಂಬ ಅನುಮಾನದ ನೂರಾರು ಪ್ರಶ್ನೆಗಳು ನಮ್ಮ ಕಣ್ಣೊಳಗೆ- ಸಮಾಜದ ಪಿಸುಪಿಸು ಧ್ವನಿೊಳಗೆ ಕೇಳಿಸುತ್ತಿವೆಯಲ್ಲವೇ, ನಿಜವಾಗಿಯೂ ಸಾಧನೆಯ ಹಾದಿಯಲ್ಲಿ ಗೌರವ ಪಡೆದವರನ್ನು ಪ್ರೀತಿಯಿಂದ ಅಭಿನಂದಿಸುವ ಆತ್ಮೀಯವಾಗಿ ಅವರಿಗೆ ನಮಿಸುವ ಕರ್ತವ್ಯ ನಮ್ಮದು. ಆದರೆ ಅವರ ಸಾಧನೆಯೇ ಅನುಮಾನ ತರಿಸುವಂತಿದ್ದರೆ ನಾವು ಕಾಣದ ಯಾವುದೇ ಸಾಧನೆಯನ್ನು ಹೆಕ್ಕಿ ತೆಗೆದರೆ ಆ ಗೌರವವನ್ನು ನಾವು ಎಷ್ಟರಮಟ್ಟಿಗೆ ಒಪ್ಪಿಕೊಳ್ಳಬೇಕು.
ಮತ್ತೊಂದು ವಿಚಿತ್ರವೆಂದರೆ ಒಂದು ಸಾಧನೆ ಮಾಡಿದವರಿಗೆ ಗೌರವ ಲಭಿಸಿದರೆ ಅದನ್ನು ಪ್ರೀತಿಯಿಂದ ಗೌರವದಿಂದ ಕಾಣುವ ಅಭಿನಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಒಳಗೊಂದು ಹೊರಗೊಂದು ಎನ್ನುವ ನಮ್ಮ ನಡುವಿನ ನೆಗೆಟಿವ್ ಮನಸುಗಳು ಇಂತಹ ನೂರಾರು ಅನುಮಾನಗಳನ್ನು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಂದು ಸಾಧನೆ ನಿಮಗೆ ಇಷ್ಟವಾಗದಿದ್ದಲ್ಲಿ ನೀವು ಸುಮ್ಮನೆ ಇದ್ದುಬಿಡಿ ಮತ್ತೆ ಏಕೆ ಕಿರಿಕಿರಿ ಎಂಬುದು ಈ ಅಂಕಣದ ಮತ್ತೊಂದು ಮುಖವಾಣಿ.