ಶಿವಮೊಗ್ಗ, ಫೆ.06:
ಕಳೆದ ಬುಧವಾರವಾದ ನಿನ್ನೆ ಮದ್ಯಾಹ್ನ ಎರಡು ಗಂಟೆಗೆ ಹೊರಬಂದ ತುಂಗಾ ತಂಗಾ ಡಾಟ್ ಕಾಮ್ ಸುದ್ದಿಯಲ್ಲಿ ಶಿವಮೊಗ್ಗದ ಅಲ್ಲಮಪ್ರಭು ಉದ್ಯಾನವನ ಫ್ರೀಡಂ ಪಾರ್ಕ್ ಗಲೀಜುಮಯವಾಗಿರುವುದು ಹಾಗೂ ವಾಕಿಂಗ್ ಮಾಡುವವರು ಮೂಗು ಮುಚ್ಚಿಕೊಂಡ ಸುದ್ದಿ ಬರೆದ ಬೆನ್ನಲ್ಲೇ ಮಹಾನಗರ ಪಾಲಿಕೆ ನಿಜಕ್ಕೂ ಮುಂದೊಳ್ಳೆ ಕೆಲಸ ಮಾಡಿದೆ ಇಡೀ ಉದ್ಯಾನವನವನ್ನು 90% ಶುಚಿಗೊಳಿಸಿದೆ ಇದು ತುಂಗಾತಂಗ ವರದಿಯ ಫಲಶೃತಿ.
ಗಲೀಜುಮಯ ಶಿವಮೊಗ್ಗ ಪ್ರೀಡಂ ಪಾರ್ಕ್,
ಕಾರ್ಯಕ್ರಮ ಮಾಡಿ ಕಸ ಬಿಟ್ಟೋದವರಿಗೆ ದಂಡ ಹಾಕಿ,
ವಾಕಿಂಗ್ ಮಾಡೋರು ತಾಳದ ಗಬ್ಬು ವಾಸನೆ,
ಅಲ್ಲೇ ಡೈಲಿ ಎಣ್ಣೆ ದರಬಾರು,
ಅಕ್ರಮ ಲೈಂಗಿಕತೆ ನಡೀತಿದೆ ನೋಡ್ರಿ,
ಬೀದಿ ನಾಯಿಗಳ ಜೊತೆ ಈಗ ಹೆಚ್ಚಿದ ಹಂದಿ ಹಾವಳಿ,
ಕಡಿವಾಣ ಹಾಕೋ ಪಾಲಿಕೆ, ರಕ್ಷಣಾ ಇಲಾಖೆ ಅಧಿಕಾರಿಗಳೇ ನಾಪತ್ತೆ,
ಅಲ್ಲೆ ಇರೋ ಭದ್ರತಾ ಪೊಲೀಸರಿಗೆ ಅಕ್ರಮ ತಡೆಗೆ ಜವಾಬ್ದಾರಿ ಕೋಡೊಕೇನು ದಾಡಿ?..,
ಇಂತಹ ನೂರಾರು ಪ್ರಶ್ನೆಗಳನ್ನು ಸಾರ್ವಜನಿಕ ವಲಯ ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಾಗೂ ಜಿಲ್ಲಾಡಳಿತಕ್ಕೆ ಕೇಳುತ್ತಿದೆ ಎಂದು ಹೇಳಿತ್ತು.
ಕಾರ್ಯಕ್ರಮ ನಡೆಯುವ ನಂತರ ಗಲೀಜಾದ ವಾಸನೆ ಕೊಳಕು ತುಂಬಿಕೊಂಡಿದ್ದು ನಿತ್ಯ ವಾಕಿಂಗ್ ಮಾಡುವವರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬಂದಿದೆ ಎಂದಿತ್ತು, ಸಕಾಲಿಕವಾಗಿ ಸ್ವಚ್ಚಗೊಳಿಸಿದ ಪೌರಕಾರ್ಮಿಕರಿಗೆ ಪತ್ರಿಕೆ ಹಾಗೂ ಓದುಗರು ಅಭಿನಂದಿಸಿದ್ದಾರೆ.
ಅಂತೆಯೇ ನಿನ್ನೆ ಸಂಜೆ ಹಾಗೂ ಪೊಲೀಸ್ ಪಹರೆ ಹೆಚ್ಚಾಗಿತ್ತೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಎಣ್ಣೆ ಹೊಡೆಯುವವರನ್ನು ಓಡಿಸಿದ್ದಾರೆ. ಅಕ್ರಮ ಲೈಂಗಿಕ ಚಟುವಟಿಕೆ ನಿಯಂತ್ರಿಸಿದ್ದಾರೆನ್ನಲಾಗಿದೆ. ಇದು ನಿರಂತರವಾಗಿರಲಿ ಎಂಬುದೇ ಸಾರ್ವಜನಿಕ ಕಳಕಳಿ.
ಅಭಿನಂದನೆ: ಅಲ್ಲಮಪ್ರಭು ಉದ್ಯಾನವನವನ್ಬು ಸ್ವಚ್ಚಗೊಳಿಸಿದ ಪೌರಕಾರ್ಮಿಕರಿಗೆ
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ,
ಉದ್ಯಮಿ ಸ್ಮಾರ್ಟ್ ಲೋಕೇಶ್ ಅಭಿನಂದಿಸಿದ್ದಾರೆ.