ಶಿವಮೊಗ್ಗ: ಸಚಿವರಿಗೆ ಆಯಾ ಸ್ಥಾನಗಳನ್ನು ನೀಡಿರುವುದು ಮುಖ್ಯಮಂತ್ರಿ ಎಲ್ಲಾ ಜವಾಬ್ದಾರಿಗಳನ್ನು ಹಂಚಿ ಎಲ್ಲೆಡೆ ಮೇಲುಸ್ತುವಾರಿ ವಹಿಸುವುದು ಸಹಜ ಆದರೆ ಸಚಿವರಾದ ಮಾತ್ರಕ್ಕೆ ಕೇವಲ ಅದೊಂದು ಇಲಾಖೆಗೆ ಮಾತ್ರ ಸಂಬಂಧಪಡದೆ ಎಲ್ಲ ಇಲಾಖೆಗಳತ್ತ ಸಮಸ್ಯೆಗಳತ್ತ ಗಮನಹರಿಸುವ ಪರಿಪಾಠ ನಿರಂತರವಾಗಿ ಕಂಡು ಬರುತ್ತಿತ್ತು


ಆದರೆ ಇಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಭೇಟಿ ನೀಡಿ ಪೌರಕಾರ್ಮಿಕನ ಆರೋಗ್ಯ ವಿಚಾರಿಸಿ ಸಂತ್ವಾನ  ಹೇಳಿದರು. ಆದರೆ, ಸ್ವಲ್ಪವೂ ಮೆಗ್ಗಾನ್ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ ‘ಬಂದ ಪುಟ್ಟ ಹೋದ ಪುಟ್ಟ..’ ಎಂಬಂತೆ ಇತ್ತು.
ಮೆಗ್ಗಾನ್ ನಲ್ಲಿರುವ ಸಮಸ್ಯೆಗಳು ಒಂದೇ ಎರಡೇ, ಸ್ವಚ್ಛತೆ, ನೀರಿನ ವ್ಯವಸ್ಥೆ, ಕಳ್ಳತನಗಳ ಬಗ್ಗೆ ಮಾಹಿತಿಯನ್ನು ವಿಚಾರಿಸದೇ ಬಂದರು.‌ ಹೋದರು ಎಂಬಂತೆ ಇತ್ತು. ಇದನ್ನು ಕನಿಷ್ಟ ಮೆಗಾನ್ ಸಮಸ್ಸೆ ಅರಿತಿದ್ದ ಕಾಂಗ್ರಸ್ ಮುಖಂಡರಾದರೂ ಹೇಳಬಹುದಿತ್ತು.’


ಮೆಗ್ಗಾನ್ ಆಸ್ಪತ್ರೆಗೆ ಡಾ. ಶ್ರೀಧರ್ ಅಧೀಕ್ಷಕ‌ ಇದ್ದ ಸಮಯಕ್ಕೂ ಈಗ ಮೆಗ್ಗಾನ್ ಅಧೀಕ್ಷಕರ ಸಮಯಕ್ಕೂ ತುಂಬಾ ವ್ಯಾತ್ಯಾಸ ಇದೆ ಎಂದರೆ ತಪ್ಪಗಲಾರದು.


ಮೆಗ್ಗಾನ್ ನಲ್ಲಿ ಕಳೆದೆರಡು ವಾರದ ಹಿಂದೆ ನೀರಿನ ಸಮಸ್ಯೆ, ಅತಿ ಹೆಚ್ಚು ಕಳ್ಳತನ, ಸ್ವಚ್ಚತೆ, ರೋಗಿಗಳ ನಾಪತ್ತೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು.
ಸಚಿವರು ಬರುವುದೇನೋ ಬಂದಿದ್ದಾರೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಸಬೇಕಾಗಿತ್ತು ಎಂಬುದು ಅಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!