ಶಿವಮೊಗ್ಗ,ಜ.6 : ನಾಡಿನ ಹಿರಿಯ ಸಾಹಿತಿ ಡಾ.ನಾ ಡಿಸೋಜಾ ಅವರ ನಿಧನದ ಸುದ್ದಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ತಿಳಿಯದೇ ಇರುವುದು ಬೇಸರದ ಸಂಗತಿ. ಅವರಿಗೆ ಪ್ರಸ್ತುತ ಮಾಹಿತಿ ತಿಳಿ ಹೇಳಿಕೊಡುವವರಾರೂ ಇಲ್ವಾ? ಕನಿಷ್ಟ ಅವರ ಜೊತೆಗಿದ್ದ ಇಲ್ಲಿನ ಕಾಂಗ್ರೆಸ್ ಮುಖಂಡರಿಗೂ ಮಾಹಿತಿ ತಲುಪಿಸುವ ವ್ಯವದಾನ ಇಲ್ವಾ..?
ಹೌದು, ಇಂದು ಬೆಳಗ್ಗೆ ಶಿವಮೊಗ್ಗ ಮೆಗ್ಗಾನ್ ಗೆ ಭೇಟಿ ನೀಡಿ ಪಾಲಿಕೆಯ ಗುತ್ತಿಗೆದಾರನ ಆರೋಗ್ಯ ವಿಚಾರಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತ ನಾ ಡಿಸೋಜಾ ಅವರು ನಿಧನರಾಗಿದ್ದಾರೆ. ಇದಕ್ಕೆ ಸಂತಾಪ ಸೂಚಿಸಬೇಕಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗಡಿಬಿಡಿ ಮಾಡಿಕೊಂಡು ಹೌದಾ ನಾ. ಡಿಸೋಜಾ ಅವರು ನಿಧನರಾಗಿದ್ದಾರೆಯೇ ಎಂದು ಸಂತಾಪ ಸೂಚಿಸಿದರು.
ನಾಡಿನ ಹಿರಿಯ ಸಾಹಿತಿ
ನಾ.ಡಿಸೋಜರವರು ಈವರೆಗೆ 37 ಕಾದಂಬರಿಗಳು, ನಾಲ್ಕು ನಾಟಕಗಳು, ಇಪ್ಪತ್ತೆಂಟು ಮಕ್ಕಳ ಕೃತಿಗಳು ಸೇರಿದಂತೆ ನೂರಾರು ಕೃತಿಗಳನ್ನು ಬರೆದಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.