ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಈ ಭಾರಿ ವಿಪರೀತ ಚಳಿ ಕಾಣಿಸಿಕೊಳ್ಳುತ್ತಿದ್ದು, ಈ ಚಳಿಗೆ ಜನತೆ ತತ್ತರಿಸಿ ಹೋಗುತ್ತಿದ್ದಾರೆ.
ಈ ಚಳಿಯ ರಭಸಕ್ಕೆ ನಗರದ ಜನತೆ ಮುಂಜಾನೆ ತೆರಳುತ್ತಿದ್ದ ವಾಕಿಂಗ್, ಜೀಮ್ ಗೆ ಹೋಗುವವರ ಸಂಖ್ಯೆ ಯಲ್ಲಿ ತೀರಾ ಕಡಿಮೆಯಾಗುತ್ತಿದೆ. ರಾತ್ರಿ ಮಲಗಿದರೆ ಬೆಳಗ್ಗೆ ಹಾಸಿಗೆ ಬಿಟ್ಟೇಳಲಾರದಷ್ಟು ಚಳಿ.
ಚಳಿಯ ಬಾಧೆಯಿಂದ ಕೆಲಸ ಕಾರ್ಯಗಳಿ ತೆರಳುವ ಜನತೆ ಮನೆಯನ್ನು ಬಿಟ್ಟು ಹೊರಗಡೆ ಬರಲು ತೀರಾ ಸರ್ಕಸ್ ನಡೆಸುತ್ತಿರುವುದು ಕಂಡುಬರುತ್ತಿದ್ದು, ಚಳಿಗೆ ದೇಹವನ್ಮು ರಕ್ಷಿಸಿಕೊಳ್ಳಲು ಟೋಪಿ, ಸ್ವಟರ್ ಹಾಕಿಕೊಂಡ ಫುಲ್ ಪ್ಯಾಕಪ್ ಅವರೂ ಸಹ ಚಳಿ ಬೆನ್ನು ಬಿಡದೇ ಕಾಡುತ್ತಿದೆ. ಸಂಜೆ 5-6ರ ಹೊತ್ತಿಗೆ ಉಷ್ಣಾಂಶದಲ್ಲಿ ಭಾರಿ ಪ್ರಮಾಣ ಕುಸಿತ ಕಂಡುಬ ರುತ್ತಿದ್ದು, ಬೆಳಗ್ಗೆ 11 ಗಂಟೆಯಾದರೂ ಬೆಳೆಯ ಅನುಭವದೇ ಹೋಗುತ್ತಿಲ್ಲವಾಗಿದೆ.
ಮುಂಜಾನೆ ಬೆಳಗ್ಗೆ ಶಿವಮೊಗ್ಗ ನಗರದಲ್ಲಿ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಭದ್ರಾವತಿಯಲ್ಲಿ 15 ಡಿಗ್ರಿ ಸೆಲ್ಸಿಯಸ್, ತೀರ್ಥಹಳ್ಳಿಯಲ್ಲಿ 14 ಡಿಗ್ರಿ ಸೆಲ್ಸಿಯಸ್, ಹೊಸನಗರ 15 ಡಿಗ್ರಿ ಸೆಲ್ಸಿಯಸ್ ಹಾಗೂ ಶಿಕಾರಿಪುರದಲ್ಲಿ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಧಿಕ ಚಳಿಯಿಂದಾಗಿ ಮನುಷ್ಯರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಶೀತಗಾಳಿ ಹೊಟ್ಟೆಯೊಳಗೆ ಹೋದರೆ ತೊಂದರೆಯಾಗುತ್ತದೆ. ಶೀತಗಾಳಿ ಜತೆಗೆ ದೂಳು ಹೊಟ್ಟೆ ಸೇರುತ್ತದೆ. ಹೀಗಾಗಿ ಮೂಗು, ಬಾಯಿ, ಕಿವಿ ಸಂರಕ್ಷಿಸಿಕೊಳ್ಳಬೇಕು. ದೇಹ ವಾತಾವರಣದೊಂದಿಗೆ ಹೊಂದಿಕೊಳ್ಳಬೇಕು ಎಂದರೆ ಬೆಚ್ಚಗಿರಬೇಕು’ ಎನ್ನುತ್ತಾರೆ ವೈದ್ಯರು.