ಶಿವಮೊಗ್ಗ : ಗಾಡಿಕೊಪ್ಪದ ಸೇವಾಲಾಲ್ ಬೀದಿಯ ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಇದು ಆತ್ಮಹತ್ಯೆ ಅಲ್ಲ ಅನುಮಾನಾಸ್ಪದ ಸಾವು ಎಂದು ಆರೋಪಿಸಿದೆ.
ಗಾಡಿಕೊಪ್ಪದ ನಿವಾಸಿ ಭೋಜ್ಯ ನಾಯ್ಕ (58) ಆತ್ಮಹತ್ಯೆ ಮಾಡಿಕೊಂಡಿರುವವರು. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೂ ಅವರ ಕುತ್ತಿಗೆಯಲ್ಲಿ ನೇಣು ಬಿಗಿದ ಕಲೆ ಇರುವುದರಿಂದ ಕುಟುಂಬ ಇದೊಂದು ಅನುಮಾನಸ್ಪದ ಸಾವು ಎಂದು ಆರೋಪಿಸಿದೆ.
ಭೋಜ್ಯ ನಾಯ್ಕ ಅಣ್ಣ ತಮ್ಮಂದಿರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ಇದ್ದು, ಪ್ರಕರಣ ಕೋರ್ಟಿನಲ್ಲಿ ಭೋಜ್ಯ ನಾಯ್ಕರ ಪರ ಕೇಸ್ ಆಗಿತ್ತು. ಆದರೆ ಈ ವಿಚಾರದಲ್ಲಿ ಸಹೋದರ ಕೃಷ್ಣನಾಯ್ಕ, ಮಗ ಶಿವಕುಮಾರ್ ಮತ್ತೋರ್ವ ಸಹೋದರ ಜಗದೀಶ್ ಭೋಜನಾಯ್ಕರಿಗೆ ಬೆದರಿಕೆ ಹಾಕುತ್ತಿದ್ದರಿಂದ ಇವರ ವಿರುದ್ಧ ಎಫ್ ಐಆರ್ ಆಗಿದೆ.
ಬೋಜ್ಯ ನಾಯ್ಕರ ದೂರನ್ನು ಠಾಣೆಯಲ್ಲಿ ಪೊಲೀಸರು ಸ್ವೀಕರಿಸುತ್ತಿರಲಿಲ್ಲ ಎಂಬ ಆರೋಪವನ್ನೂ ಕುಟುಂಬ ಮಾಡಿದೆ.
ಈ ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.