ಶಿವಮೊಗ್ಗ:ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನ.19ರಿಂದ ನ.26ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಗಿಡಕ್ಕೆ ನೀರು ಎರೆಯುವುದರ ಮೂಲಕ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಪ್ರೊ. ನಾಗರಾಜ್ ಕೆ.ಎಂ. ಗ್ರಂಥಾಲಯಗಳು ದೇವರ ಗುಡಿ ಇದ್ದಂತೆ ಜ್ಞಾನರ್ಜನೆಯೇ ನಾವು ಸಲ್ಲಿಸುವ ಪೂಜೆಯಾಗಿದೆ. ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಒಮ್ಮೆ ಗ್ರಂಥಾಲಯ ಹೊಕ್ಕರೆ ಇಡೀ ಜಗತ್ತನೇ ನೋಡಿದ ಅನುಭವವಾಗುತ್ತದೆ. ದೇಶ ಸುತ್ತು ಇಲ್ಲ ಕೋಶ ಓದು ಎಂಬ ಗಾದೆÉಯಂತೆ ಗ್ರಂಥಾಲಯಗಳು ಇರುತ್ತವೆ ಎಂದರು.
ವಿದ್ಯಾರ್ಥಿನಿಯರಾದ ಧನ್ಯಶ್ರೀ, ಕೃತಿಕಾ, ತೇಜಸ್ವಿ, ತುಷಾರಗೌರಿ ಪುಸ್ತಕಗಳ ಪರಿಚಯ ಮಾಡಿಕೊಟ್ಟರು. ಪ್ರಾಚಾರ್ಯೆ ಮಮತಾ ಪಿ.ಆರ್. ಉಪನ್ಯಾಸಕ ಪ್ರೊ. ಗೋವಿಂದ ಯಶಸ್ ಮುಂತಾದವರು ಉಪಸ್ಥಿತರಿದ್ದರು.
ಗ್ರಂಥಪಾಲಕ ಹೆಚ್.ಜಿ. ಪುನೀತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಜ್ನಾ ಕೆ.ಆರ್. ನಿರೂಪಿಸಿದರು. ವರ್ಷತಾ ವಂದಿಸಿದರು.