ಶಿವಮೊಗ್ಗ,ನ.22:
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮಠದ ರೂವಾರಿಗಳೂ ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ತಾಯಿ ಶ್ರೀಮತಿ ಗಂಗಮ್ಮ ಅವರು ವಯೋ ಸಹಜವಾಗಿ ಇಂದು ಚೆಂಬು ಗ್ರಾಮದಲ್ಲಿ ನಿಧನರಾದರು.
ಶ್ರೀಗಳು ತಾಯಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಇಂದು ಮಧ್ಯಾಹ್ನ ಚೆಂಬು ಗ್ರಾಮಕ್ಕೆ ಬೇಟಿ ನೀಡಲಿದ್ದಾರೆ.
ಸ್ವಾಮೀಜಿಯವರಿಗೆ ಕರೆ ಮಾಡಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರು ಸಂತಾಪ ಸೂಚಿಸಿದರು.