ಶಿವಮೊಗ್ಗ,ನ.18 :ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಹೊಳೆಹೊನ್ನೂರು ಸಮೀಪದ ಬೊಮ್ಮನ ಕಟ್ಟೆ ಬಳಿ ನಡೆದಿದೆ. ಮೃತರನ್ನು ಅನಿತಾ (೩೦) ಮತ್ತು ರತ್ನಮ್ಮ (೫೫) ವರ್ಷ ಎಂದು ಗುರುತಿಸಲಾಗಿದೆ. ಇವರು ಹೊಳಲ್ಕೆರೆಯ ತಾಳ್ಯ ನಿವಾಸಿಗಳು. ತಮ್ಮ ಪತಿಯ ಜೊತೆ ಅನಿತಾ ಹಾಗೂ ಅವರ ಅತ್ತೆ ರತ್ನಮ್ಮ ಊರಿಗೆ ಬರುತ್ತಿದ್ದರು.
ಈ ವೇಳೆ ರಸ್ತೆಗೆ ಅಡ್ಡಬಂದ ನಾಯಿಗೆ ಕಾರು ಡಿಕ್ಕಿಯಾ ಗುವುದನ್ನ ತಪ್ಪಿಸಲು ಹೋಗಿ ಕಾರು ಕೆರೆಗೆ ಉರುಳಿದೆ. ಕೆರೆ ಏರಿ ಮೇಲೆಯೇ ಘಟನೆ ನಡೆದಿದ್ದರಿಂದ ಚಾಲಕನಿಗೆ ಕಾರು ಕಂಟ್ರೋಲ್ಗೆ ಸಿಗದೇ ಕೆರೆಗೆ ಸೀದಾ ಕಾರು ಇಳಿದಿದೆ. ಇನ್ನು ಕಾರು ಕೆರೆಗೆ ಬಿದ್ದ ಬೆನ್ನಲ್ಲೆ, ಆಘಾತಕ್ಕೊಳಗಾದ ಅನಿತಾ ರತ್ನಮ್ಮ ಅಲ್ಲಿಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ವಿಚಾರವಾಗಿ ಹೊಳೆಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಪರಿಶೀಲನೆ ನಡೆಸ್ತಿದ್ದಾರೆ.