ಶಿವಮೊಗ್ಗ,ನ.18 : ನ.೨೧ರಿಂದ ೨೯ರವರೆಗೆ ನವುಲೆಯ ಕೆಎಸ್ಸಿಎ ಮತ್ತು ಜೆಎನ್ಎನ್ಸಿ ಕ್ರೀಡಾಂಗಣದಲ್ಲಿ ೧೫ ವರ್ಷ ವಯೋಮಿತಿಯ ಅಂತರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಮಿತಿಯ ಸಂಚಾಲಕರು ಹಾಗೂ ಮಾಜಿ ಶಿವಮೊಗ್ಗ ವಲಯ ಸಂಚಾಲಕರಾದ ಡಿ.ಎಸ್.ಅರುಣ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಬಿಸಿಸಿಐಯು ದೇಶದಲ್ಲಿ ಕಳೆದ ಎರಡು ವರ್ಷಗಳಿಂದ ೧೫ ವರ್ಷ ವಯೋಮಿತಿಯ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಶಿವಮೊಗದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ರಾಷ್ಟ್ರದ ವಿವಿಧ ರಾಜ್ಯಗಳ ೩೬ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈ ೩೬ ತಂಡಗಳನ್ನು ತಲಾ ಆರು ತಂಡಗಳಂತೆ ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ’ಎ’ ಗುಂಪಿನ ಆರು ತಂಡಗಳ ಪಂದ್ಯಾವಳಿಗಳು ಶಿವಮೊಗ್ಗದ ನವುಲೆ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಮತ್ತು ಜೆ.ಎನ್.ಎನ್.ಸಿ.ಇ. ಶಿವಮೊಗ್ಗ, ಅಂಕಣಗಳಲ್ಲಿ ನಡೆಯಲಿದೆ ಎಂದರು.
’ಎ’ ಗುಂಪಿನಲ್ಲಿ ಬಿಹಾರ, ತಮಿಳುನಾಡು, ಹರಿಯಾಣ, ಕೇರಳ, ನಾಗಾಲ್ಯಾಂಡ್ ಮತ್ತು ಹೈದೆರಾಬಾದ್ ರಾಜ್ಯಗಳ ತಂಡಗಳನ್ನೊಳಗೊಂಡಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ’ ಬಿ’ ಗುಂಪಿನಲ್ಲಿ ಡೆಹ್ರಾಡೂನ್ನಲ್ಲಿ ಆಡುತ್ತಿದ್ದು ದೆಹಲಿ, ಬರೋಡ, ಅಸ್ಸಾಂ, ಚಂಡೀಗಢ ಮತ್ತು ತ್ರಿಪುರ ರಾಜ್ಯಗಳು ಈ ಗುಂಪಿನ ಇತರೆ ತಂಡಗಳಾಗಿವೆ ಎಂದರು.
ನ. ೨೧ರಿಂದ ಪ್ರಾರಂಭವಾಗುವ ಈ ಪಂದ್ಯಾವಳಿಗಳು ನ.೨೯ರವರೆಗೆ ನಡೆಯಲ್ಲಿದ್ದು, ಪ್ರತಿ ದಿನ ಮೂರು ಪಂದ್ಯಗಳಂತೆ ಒಟ್ಟಾರೆ ೧೫ ಪಂದ್ಯಗಳು ನಡೆಯಲಿದೆ.ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಮಧ್ಯ ಒಂದು ದಿನದ ವಿಶ್ರಾಂತಿ ಇರುತ್ತದೆ. ಈ ಪಂದ್ಯಾವಳಿ ಬಿಳಿ ಬಣ್ಣದ ಬಾಲ್ಗಳಲ್ಲಿ ಆಡಲಿದ್ದು, ಆಟಗಾರರು ಬಣ್ಣದ ಪೋಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು ೩೫ ಓವರ್ ಮಿತಿಯಲ್ಲಿ ಒನ್ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ ಎಂದರು.
ಈ ಪಂದ್ಯವಳಿಗಳನ್ನು ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಆಗಮಿಸುತ್ತಿದ್ದಾರೆ. ಈ ಪಂದ್ಯವಳಿಗಳನ್ನು ಆಯೋಜಿಸಲು ಶಿವಮೊಗ್ಗ ವಲಯವು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದರು.
ನ.೨೧ರ ಬೆಳಿಗ್ಗೆ ೯ಕ್ಕೆ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಉದ್ಘಾಟಿಸಲಿದ್ದಾರೆ. ಹಾಗೆಯೇ ಇದೇ ದಿನ ಜೆಎನ್ಎನ್ಸಿಇ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವಳಿಯನ್ನು ಎನ್ಇಎಸ್ ಸಂಸ್ಥೆ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಜೆಎನ್ಎನ್ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯ್ಕುಮಾರ್ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ವಲಯ ಸಂಚಾಲಕ ಎಚ್.ಎಸ್.ಸದಾನಂದ್, ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಶಿವಮೊಗ್ಗ ಅಂಪೈರ್ ಸುಬ್ರಹ್ಮಣ್ಯ, ಮಾಧ್ಯಮ ಪ್ರಮುಖರು ಗೋಪಾಲಕೃ