ಶಿವಮೊಗ್ಗ, ನ.19:
ಆರ್ ಎಸ್ ಎಸ್ ಹಾಗೂ ಬಿಜೆಪಿ ವಿಷಕಾರಿ ಹಾಗೂ ಅದನ್ನು ಕೊಲ್ಲಬೇಕು ಎಂದು ಹೇಳಿರುವ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಈಶ್ವರಪ್ಪ ಇವರ ಆಕ್ಷೇಪ ವ್ಯಕ್ತಪಡಿಸಿದ್ದು ಈ ದೇಶದಲ್ಲಿ ಆರ್ ಎಸ್ ಎಸ್ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದು ನಿಮಗೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.

ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಮಗೆ ಗೌರವ ಇತ್ತು, ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅಂತವರಿಗೆ ಆರ್ ಎಸ್ ಎಸ್ ವಿರುದ್ಧ ಏನೂ ಮಾಡಲು ಆಗಲಿಲ್ಲ. ನಿಮ್ಮನ್ನು ಆರ್ ಎಸ್ ಎಸ್ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನೀವು ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು.

ನಿಮ್ಮ ಬಾಯಿಂದ ಇಂತಹ ಪದ ಬರಬಾರದಿತ್ತು. ದೇಶದ ಜನರೇ ಆರ್ ಎಸ್ ಎಸ್ ಅನ್ನು ಒಪ್ಪಿಕೊಂಡಿದ್ದಾರೆ. ಆರ್ ಎಸ್ ಎಸ್ ಕೇವಲ ಹಿಂದೂ ಧರ್ಮವನ್ನು ಕಾಪಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ ವ್ಯಕ್ತಿಯಲ್ಲಿರುವ ವ್ಯಕ್ತಿತ್ವವನ್ನು ಉಳಿಸಿ ಬೆಳೆಸುವಲ್ಲಿ ಸಕ್ರಿಯವಾಗಿದೆ. ಅಧಿಕಾರದ

ದಾಹದಿಂದ ಇಂತಹ ಮಾತನಾಡಬೇಡಿ ಎಂದಿದ್ದಾರೆ. ದೇಶದ ಜನರ ಕ್ಷಮೆಯನ್ನು ನೀವು ಕೇಳಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಆರ್ ಎಸ್ ಎಸ್ ಬಿಜೆಪಿ ಸೇರಿದಂತೆ ಎಲ್ಲಾ ಬಹುತೇಕ ಸಂಘಟನೆಗಳಿಗೆ ಮಾತು ಸಂಸ್ಥೆ ಎಂದು ಈಶ್ವರಪ್ಪ ಹೇಳಿದರು.