ಶಿವಮೊಗ್ಗ : ಸಂತ ನಾಮದೇವ ಸಿಂಪಿ ಸಮಾಜವು ಶರಾವತಿ ನಗರದ ಶ್ರೀ ವಿಠ್ಠಲ ರಖುಮಾಯಿ ಮಂದಿರದಲ್ಲಿ ಇಂದು “ಆಷಾಢ ಏಕಾದಶಿ” ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು.

ಇಂದು ಬೆಳಿಗ್ಗೆ ದೇವರಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಭಜನ್, ೯-೩೦ಕ್ಕೆ ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ೧-೦೦ ರವರೆಗೆ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಇಂದು ಸಂಜೆ ೫-೦೦ ರಿಂದ ೭.೩೦ ಘಂಟೆಯವರೆಗೆ ಭಜನೆ, ಸತ್ಸಂಗ, ಸಂತವಾಣಿ, ಪಲ್ಲಕ್ಕಿ ಉತ್ಸವ ೮.೦೦ ಘಂಟೆಗೆ ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ಇರುತ್ತದೆ.

ಸಮಾಜ ಬಾಂಧವರು ಹಾಗೂ ಭಕ್ತ ಮಹಾಶಯರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದೇವರ ದರ್ಶನ, ಪ್ರಸಾದ ಪಡೆದು ಪುನೀತರಾಗುವಂತೆ ಶ್ರೀ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ರಘುನಾಥ್ ಭಾಸ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.