
ಶಿವಮೊಗ್ಗ,ಸೆ.09:
ಇಲ್ಲಿನ ಗೋಪಾಳದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಕಳೆದ ಆಗಸ್ಟ್ 22ರಂದು ನಡೆಸಿದ ಶಿವಮೊಗ್ಗ ನಗರದ ಅಂತರ ಶಾಲಾ ಮಟ್ಟದ ಗಣಪ ಚಿತ್ರ ಸ್ಪರ್ಧೆಯ ವಿಜೇತರಿಗೆ ಸೆಪ್ಟೆಂಬರ್ 16ರ ಬುಧವಾರ ಮಧ್ಯಾಹ್ನ 2 ಗಂಟೆಗೆ ಬಹುಮಾನ ವಿತರಿಸಲಾಗುತ್ತದೆ ಎಂದು ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ತಿಳಿಸಿದೆ.


ಹಿಂದೆ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ಸಾವಿರಾರು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಎಲ್ ಕೆಜಿಯಿಂದ ಎಸ್ ಎಸ್ ಎಲ್ ಸಿ ಒಳಗಿನ ಎಲ್ಲಾ ಶಾಲಾ ಮಕ್ಕಳಿಗೆ ತಲಾ ಮೂರು ಬಹುಮಾನಗಳಂತೆ ಒಟ್ಟು 36 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಸಮಾರಂಭ ನಡೆಯಲಿದೆ.


ಶಿವಮೊಗ್ಗ ನಗರದ ರಾಮಕೃಷ್ಣ ವಿದ್ಯಾನಿಕೇತನದ ಜೊತೆಗೆ ನಗರದ ಆದಿಚುಂಚನಗಿರಿ, ಎನ್ಇಎಸ್ ನ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಮೇರಿ ಇಮ್ಯಾಕ್ಯುಲೇಟ್, ವಾಸವಿ, ವಿಕಾಸ, ವಿದ್ಯಾವರ್ಧಕ ಪಬ್ಲಿಕ್ ಸ್ಕೂಲ್, ಜ್ಞಾನದೀಪ, ಮೌಂಟ್ ಕಾರ್ಮೆಲ್, ಅಯ್ಯಪ್ಪ, ಪಿ ಎಂ ಕೇಂದ್ರೀಯ ವಿದ್ಯಾಲಯದ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಈ ಚಿತ್ರಗಳನ್ನು ಉನ್ನತ ಮಟ್ಟದ ತೀರ್ಪುಗಾರರು ಪರೀಕ್ಷಿಸಿ ಬಹುಮಾನವನ್ನು ಪ್ರಕಟಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ಅವರು ಬಹುಮಾನ ವಿತರಿಸಲಿದ್ದಾರೆ.
ಸೆ.16 ರ ಬಹುಮಾನ ವಿತರಣಾ ಸಮಾರಂಭಕ್ಕೆ ವಿಜೇತ ಮಕ್ಕಳು ಆಗಮಿಸಲು ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಕೋರಿದ್ದಾರೆ.