ಶಿವಮೊಗ್ಗ, ಜು.25:
ಕಾಶಿಪುರದ ನಿವಾಸಿ ದುರ್ಗಪ್ಪ ಅವರ ಪತ್ನಿ ಸಾವಿತ್ರಮ್ಮ (62) ಅವರು ನಿಧನರಾಗಿದ್ದಾರೆ.
ಇವರಿಗೆ ಮೂವರು ಪುತ್ರರು, ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ತೇಜಸ್ಕುಮಾರ್ ಅವರ ತಾಯಿಯಾಗಿದ್ದು, ಇಂದು ಸಂಜೆ ಶರಾವತಿ ನಗರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಇವರ ನಿಧನಕ್ಕೆ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮೇನಹಳ್ಳಿ, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.