ಶಿವಮೊಗ್ಗ: ಒಂದು ಮುಷ್ಠಿಯೊಳಗೆ ಪ್ರಪಂಚವೇ ಇದ್ದು ಅಂಕ ಗಳಿಕೆಯ ಶಿಕ್ಷಣದಲ್ಲಿ ಆತ್ಮ ವಿಶ್ವಾಸ ವೃದ್ಧಿಸುವ ಶಿಕ್ಷಣ ಸಿಗುತ್ತಿಲ್ಲೆ ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಡಾ.ಶರತ್ ಮರಿಯಪ್ಪ ಫೌಂಡೇಷನ್, ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್ ಶಿವಮೊಗ್ಗ ಹಾಗೂ ಸ್ಪರ್ಧಾ ಅರಿವು ಅಕಾಡೆಮಿ ಬೆಂಗಳೂರು ಮತ್ತು ಸಾಧನಾ ಅಕಾಡೆಮಿ ಶಿಕಾರಿಪುರ ಇವರ ಸಹಯೋಗದಲ್ಲಿ ‘ನಿಮ್ಮ ಕನಸು ನಮ್ಮ ಸಂಕಲ್ಪ’ ಉದ್ಯೋಗ ಪಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎರಡು ತಿಂಗಳ ಉಚಿತ ತರಬೇತಿ ಕಾರ್ಯಕ್ರಮ ತರಬೇತಿ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಿಮ್ಮ ಗುರಿ ಮುಟ್ಟಲು ಏಕಾಗ್ರತೆ ಬಹಳ ಮುಖ್ಯ. ಮೊಬೈಲ್ ಬಳಕೆ ಸಂವಹನಕ್ಕೆ ಮಾತ್ರ ಇರಬೇಕು. ರೀಲ್ಸ್ ಗಳಲ್ಲಿ ಪ್ರದರ್ಶನ ಮಾತ್ರ ಇರುತ್ತದೆ. ಮುಂದಿನ ಜೀವನಕ್ಕೆ ಬೇಕಾದ ಪ್ರಾಮಾಣಿಕ ಅಂಶಗಳ ಕೊರತೆ ಅದರಲ್ಲಿದೆ. ರೀಲ್ಸ್ ಗೆ ಬಲಿಯಾದರೆ ಮುಂದಿನ ಭವಿಷ್ಯ ಅಂಧಾಕಾರಕ್ಕೆ ಹೋಗುತ್ತದೆ ಎಂದರು.

ಕರಪ್ಷನ್ ಮತ್ತು ಕಾಂಪಿಟೇಷನ್ ನಡುವೆ ಉದ್ಯೋಗ ನಿರ್ಮಾಣವಾಗುತ್ತಿಲ್ಲ. 4 ಲಕ್ಷ ಕೋಟಿ ರೂ. ಮೊತ್ತದ ರಾಜ್ಯದ ಬಜೆಟ್ ನಲ್ಲಿ ಶೇ. 40ರಷ್ಟು ಸರ್ಕಾರಿ ನೌಕರರ ಸಂಬಳಕ್ಕೆ ಹೋಗುತ್ತಿದೆ. ರಾಜ್ಯದ ಕೇವಲ ಶೇ. 1ರಷ್ಟು ಇರುವ ಸರ್ಕಾರಿ ನೌಕರರಿಗೆ ಈ ಹಣ ಹೋದರೆ ಪೆನ್ಷನ್ ಮತ್ತು ಬಡ್ಡಿ ಹಾಗೂ ಇತರ ಖರ್ಚು ವೆಚ್ಚಗಳಿಗೆ ಶೇ. 30ರಷ್ಟು ಹೋದರೆ ಇನ್ನುಳಿದ 1 ಲಕ್ಷ ಕೋಟಿ ರೂ.ನಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ ಮತ್ತು ಮೂಲಭೂತ ಸೌಲಭ್ಯಕ್ಕೆ ಹೋಗುತ್ತಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರಿ ಖಾಲಿ ಇದ್ದರೂ ಸರ್ಕಾರ ಭರ್ತಿ ಮಾಡುವ ಗೋಜಿಗೆ ಹೋಗಲ್ಲ. ಖಾಸಗಿ ಸಂಸ್ಥೆಯ ಉದ್ಯೋಗಿಗಳಿಗೆ ಎಐ ಭಯ ಕಾಡುತ್ತಿದೆ. ನಮ್ಮ ರಾಜ್ಯದÀಲ್ಲೇ ಉದ್ಯೋಗ ಕಳೆದುಕೊಳ್ಳುವ ಭೀತಿಯ ನಡುವೆ ಸುಮಾರು 2 ಲಕ್ಷ ಅಪಾರ್ಟ್ಮೆಂಟ್ ಗಳು ಖಾಲಿ ಬಿದ್ದಿವೆ. ಅಭದ್ರತೆಯ ಸ್ಥಿತಿಯಲ್ಲಿದ್ದೇವೆ ಎಂದರು.
ಯುವಕರು ಹೊರ ಜಗತ್ತಿನ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಕಠಿಣ ಶ್ರಮ ಪಡಬೇಕು. ಪ್ರತಿಭೆ ಹೊರ ಹಾಕುವ ಶಿಕ್ಷಣ ಪದ್ಧತಿ ಜಾರಿಗೆ ತರಬೇಕು. ಪ್ರತಿ ಹೆಜ್ಜೆಯೂ ಸ್ಪರ್ಧಾತ್ಮಕವಾಗಿದ್ದು, ಕಾಲಕ್ಕೆ ತಕ್ಕ ಹಾಗೆ ತಾವೂ ಕೂಡ ಸಿದ್ಧರಾಗಬೇಕು. ಈ ರೀತಿಯ ಉಚಿತ ತರಬೇತಿ ಶಿಬಿರದ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಕ್ಷಣ ತಜ್ಞ ಆರ್ಯ ಪಿಯು ಕಾಲೇಜಿನ ಮುಖ್ಯಸ್ಥ ಎನ್. ರಮೇಶ್ ಮಾತನಾಡಿ, ಆರ್ಥಿಕ ಸದೃಢವಾಗಲು ಉದ್ಯೋಗ ಬೇಕೇ ಬೇಕು. ಶರತ್ ಮರಿಯಪ್ಪ ಅವರ ಅಜ್ಜನಂತೆ ಉದಾರ ಮನಸ್ಸು ಮತ್ತು ವೈರಿಗಳನ್ನೂ ಪ್ರೀತಿಯಿಂದ ಕಾಣುವ ಗುಣ ಹೊಂದಿದ್ದಾರೆ. ಈ ರೀತಿಯ ಉಚಿತ ತರಬೇತಿ ನೀಡುವ ಕಾರ್ಯಕ್ರಮ ಆಯೋಜನೆ ತುಂಬಾ ಕಷ್ಟದ ಕೆಲಸ. ಇವತ್ತು ದೇಶದಲ್ಲಿ ಎಲ್ಲಾ ಸರ್ಕಾರಿ ಕಂಪನಿಗಳು ಖಾಸಗೀಕರಣ ಆಗುತ್ತಿವೆ. ಈ ಸಂದರ್ಭದಲ್ಲಿ ಸರ್ಕಾರಿ ಕೆಲಸ ಸುಲಭದ ಮಾತಲ್ಲ. ವಿದ್ಯಾವಂತರ ಸಂಖ್ಯೆ ಜಾಸ್ತಿ ಇದೆ. ಉದ್ಯೋಗ ಕಡಿಮೆ ಇವೆ. 100 ಉದ್ಯೋಗಕ್ಕೆ 10 ಸಾವಿರ ಜನ ಅರ್ಜಿ ಹಾಕುತ್ತಾರೆ. ಈಗ ಎಲ್ಲವನ್ನೂ ಎಐ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಂಕದ ಜೊತೆಯಲ್ಲಿ ಕೌಶಲ್ಯ ಇರಬೇಕು ಎಂದರು.

ಹೆತ್ತವರಿಗೆ ಮೋಸ ಮಾಡಬಾರದು. ತರಬೇತಿ ಇಲ್ಲದೇ ಸ್ಪರ್ಧೆ ಮಾಡುವುದು ಕಷ್ಟ. ನೀವು ಎರಡು ವರ್ಷ ಕಷ್ಟಪಟ್ಟರೆ 50 ವರ್ಷ ಸುಖವಾಗಿ ಇರಬಹುದು. ಬೆಳಗ್ಗೆ 4 ಗಂಟೆಗೆ ಎದ್ದು ಸಾಧನೆ ಮಾಡಬೇಕು. ಸರ್ಕಾರ ಮಾಡುವ ಕೆಲಸವನ್ನು ಶರತ್ ಮರಿಯಪ್ಪ ಮಾಡುತ್ತಿದ್ದಾರೆ ಎಂದರು.
ತರಬೇತಿ ತಜ್ಞ ಶಂಕರ್ ಮಾತನಾಡಿ, ಭಾರತ ಯುವಕರ ದೇಶ. ವಿಭಿನ್ನ ಆಲೋಚನೆಗಳು ಮಾತ್ರ ವಿಭಿನ್ನ ದಿಕ್ಕನ್ನು ತೋರಿಸುತ್ತದೆ. ತಾರ್ಕಿಕ ಆಲೋಚನೆಗಳು ಮಕ್ಕಳಲ್ಲಿ ಬೆಳೆದಾಗ ಮಾತ್ರ ಆವಿಷ್ಕಾರಗಳು ಸಾಧ್ಯ ಎಂದರು.
ಹಿಂದೆ ಭಾರತದಲ್ಲಿ ಕೇವಲ 10 ರಷ್ಟು ಮಾತ್ರ ವಿದ್ಯಾವಂತರಿದ್ದು, ಶೇ. 90 ರಷ್ಟು ಜನ ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದರು. ಈಗ ಭಾರತದಲ್ಲಿ ವಿದ್ಯಾವಂತರ ಸಂಖ್ಯೆ ಶೇ. 90ರಷ್ಟು ಇದೆ. ಅವರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ ಎಂದು ಸಮಾಜ ಸೇವಕ ಡಾ. ಶರತ್ ಮರಿಯಪ್ಪ ಹೇಳಿದರು.
ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಕರ್ನಾಟಕ ಸರ್ಕಾರ 60 ಸಾವಿರ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಒಳ್ಳೆಯ ಮನಸ್ಸಿನಿಂದ ಪ್ರಯತ್ನ ಪಟ್ಟರೆ ಫಲ ಸಿಗುತ್ತದೆ. ಇಚ್ಛಾಶಕ್ತಿ ಬೇಕು. ವಿದ್ಯಾವಂತರು ಉದ್ಯೋಗ ಪಡೆಯಲು ಹಲವಾರು ಅಕಾಡಮಿಗಳಿಗೆ ಕೋಚಿಂಗ್ ಗಾಗಿ ಲಕ್ಷಾಂತರ ರೂ. ವ್ಯಯ ಮಾಡುತ್ತಾರೆ. ಎಲ್ಲರಿಗೂ ಸರ್ಕಾರಿ ನೌಕರಿ ಕನಸು ಇರುತ್ತದೆ. ಈ ನಿಟ್ಟಿನಲ್ಲಿ ಉಚಿತವಾಗಿ ಎರಡು ತಿಂಗಳು ಕೆಎಎಸ್, ಕೆಪಿಎಸ್ಸಿ, ಎಫ್ಡಿಎ, ಪಿಡಿಒ, ಎಸ್ಡಿಎ, ಪಿಎಸ್ಐ, ಲ್ಯಾಂಡ್ ಸರ್ವೇಯರ್, ಎನ್ಇಟಿ, ಸಿಟಿಐ ವಿಎ, ಎಸ್ಎನ್ಇಟಿ, ಜಿಪಿಟಿ,ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ತರಬೇತಿ ನೀಡುತ್ತಿದ್ದು, ಸೆ. 19ರಂದು ವಿವಿಧ ಕಂಪನಿಗಳ ಆಶ್ರಯದಲ್ಲಿ ನಡೆಯಲಿರುವ ಉದ್ಯೋಗಮೇಳದಲ್ಲಿ ಮೂರು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು. ಸ್ಥಳದಲ್ಲೇ ಅವರಿಗೆ ಉದ್ಯೋಗ ಪತ್ರ ನೀಡಲಾಗುವುದು. ಉದ್ಯೋಗ ದೊರೆತರೆ ಕುಟುಂಬದ ಭರವಸೆಯಾದಂತೆ. ಸೆ. 26ರಿಂದ 15 ದಿ£ಗಳÀ ಕಾಲ ಮತ್ತೆ ನಮ್ಮ ಫೌಂಡೇಷನ್ ನಿಂದ ಬಿಎಡ್ ವಿದ್ಯಾರ್ಥಿಗಳಿಗೂ ಕೂಡ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಒಮ್ಮೆ ಸೋತರೆ ಅದು ಸೋಲಲ್ಲ, ಪ್ರಯತ್ನ ನಿಲ್ಲಿಸಿದಾಗ ಮಾತ್ರ ಅದು ಸೋಲು. ಉದ್ಯೋಗ ಪಥ ನಿಮ್ಮ ಕನಸು ನನಸಾಗಿಸಲು ನಮ್ಮ ಸಂಕಲ್ಪ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್, ಪ್ರಮುಖರಾದ ರಂಗನಾಥ್ ಕೆ., ಜಿ.ಡಿ. ಮಂಜುನಾಥ್, ವಿನೋದ್ ಕೆ., ಪ್ರವೀಣ್ ಕುಮಾರ್, ರಾಜಶೇಖರ್, ಆಲ್ತಾಫ್ ಫರ್ವಿಜ್, ಕೇಶವ, ಹೆಚ್.ಪಿ. ಗಿರೀಶ್, ಕುಬೇಂದ್ರಪ್ಪ, ಸಂಪನ್ಮೂಲ ವ್ಯಕ್ತಿಗಳಾಗಿ ಸಾಧನಾ ಅಕಾಡಮಿಯ ಬಿ. ಮಂಜುನಾಥ್, ಸ್ಪರ್ಧಾ ಅರಿವು ಅಕಾಡಮಿಯ ಪಿ.ವಿ. ಬೈರಪ್ಪ, ಪಿಎಸ್ಐ ಕಿಟ್ಟಿ ಸರ್, ಸವಿತಾ ಮೊದಲಾದವರಿದ್ದರು.