
ಶಿರಾಳಕೊಪ್ಪ,ಸೆ.10:
ಶಿರಾಳಕೊಪ್ಪದಿಂದ ಸೊರಬಕ್ಕೆ ತೆರಳುವಾಗ ಛತ್ರದಹಳ್ಳಿ ಬಳಿ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಅನ್ನು ಯುವಕರೊಬ್ಬರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ.




ಸೊರಬ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಎಸ್.ಕೊಟ್ರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎದುರಿಗೆ ಬರುತ್ತಿದ್ದ ಲಾರಿಯ ಡಿಕ್ಕಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಅಲ್ತಾಫ್ ಎಂಬುವವರು ತಕ್ಷಣವೇ ನೀರಿಗೆ ಹಾರಿ ತಲೆಕೆಳಗಾಗಿ ಬಿದ್ದಿದ್ದ ಕಾರಿನ ಡೋರ್ ತೆಗೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಸ್. ಕೊಟ್ರೇಶ್ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿದ್ದಾರೆ.
