ಶಿವಮೊಗ್ಗ,ಜು.೨೨: ಬೆಳೆ ಹಾನಿಗೆ ಒಳಗಾದ ರೈತರಿಗೆಕೂಡಲೇ ಪರಿಹಾರ ನೀಡಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಜೆಡಿಎಸ್ ರೈತ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತರ ಮಾರಕ ನಿಯಮಗಳಾದ ಐಪಿಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ಕೂಡಲೇ ಬಿಡಬೇಕು. ಕೃಷಿ ಪರಿಕರ ಮತ್ತು ಉಪಕರಣಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಬಿಡುಗಡೆ ಮಾಡಬೇಕು. ೨೦೨೪-೨೫ರ ಸಾಲಿನ ರೈತರ ಪಹಣಿಯಲ್ಲಿ ಬೆಳೆ ನಮೂದು ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.
ಭದ್ರಾ ಗೋಂದಿ ನಾಲೆಯ ಕೊನೆಯವರೆಗೂ ನೀರು ಹರಿಯುವಂತೆ ನಾಲೆಯ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಗ್ರಾಮಾಂತರ ಆನವೇರಿ ಗ್ರಾ.ಪಂ.ಇಟ್ಟಿಗೆ ಹಳ್ಳಿ ಗ್ರಾಮದಲ್ಲಿ ನೂತನ ಕೆರೆ ನಿರ್ಮಿಸಬೇಕು. ಜಿ.ಪಂ.,ತಾ.ಪಂ.,ಮಹಾನಗರ ಪಾಲಿಕೆ ತಕ್ಷಣವೇ ಚುನಾವಣೆ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಘಟಕದ ಜಿಲ್ಲಾಧ್ಯಕ್ಷ ಎಂ.ದಾನೇಶ್, ಜೆಡಿಎಸ್ ಕಾರ್ಯಧ್ಯಕ್ಷ ದಾದಾಪೀರ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಪ್ರಮುಖರಾದ ಕೆ.ಪಿ.ಓಂಕಾರಪ್ಪ, ಸಿ.ಪಿ.ನಾಗರಾಜ್, ಹೆಚ್.ಆರ್.ಮಹೇಶ್ವರಪ್ಪ, ಎಸ್.ಎಲ್.ನಿಖಿಲ್, ರುದ್ರೇಶ್, ಹೆಮೇಶ್, ಕೆ.ಆರ್. ಮೃತ್ಯುಂಜಯ, ಹೆಚ್.ಆರ್. ದೇವರಾಜ್, ಪ್ರೇಮ್‌ಕುಮಾರ್ ಮುಂತಾದವರು ಇದ್ದರು.