
ಬೆಂಗಳೂರು,ಜೂ.23: ದಿನ ಕಳೆಯುತ್ತಿದ್ದಂತೆ ರಾಜದಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ರುದ್ರ ನರ್ತನ ಶುರು ಮಾಡಿದ್ದು ಇಂದೂ ಸಹ ಹೊಸದಾಗಿ 107 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಇಂದು ಒಂದೇ ದಿನ 322 ಮಂದಿಗೆ ಸೋಂಕು ತಗುಲಿದೆ.
ಇನ್ನು ರಾಜ್ಯದಲ್ಲಿ ಕೊರೋನಾಗೆ ಇಂದು 8 ಮಂದಿ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ.
ಇಂದು ಹೊಸದಾಗಿ 322 ಪ್ರಕರಣಗಳು ವರದಿಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 6,004 ಮಂದಿ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ.
ಮಲೆನಾಡು ಕೊರೊನಾಗೆ ನಿಜಕ್ಕೂ ತತ್ತರಿಸಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಇಂದು ಐದು ಹೆಚ್ಚಿದ್ದು ನಾಳೆ ಇನ್ನಷ್ಡು ಭಯದ ಫಲಿತಾಂಶ ಬರಲಿದೆ ಎನ್ನಲಾಗಿದೆ.
ತುಂಬಾ ಸ್ಟಾಂಡರ್ಡ್ ಎನಿಸಿಕೊಳ್ಳುವ ಸ್ವಾಮಿ ವಿವೇಕಾನಂದ ಬಡಾವಣೆ ಸೀಲ್ಡೌನ್ ಆದ ನಂತರ ಭದ್ರಾವತಿ ಕಾಗದನಗರ, ಶಿಕಾರಿಪುರದ ಬಡಾವಣೆಯೊಂದನ್ನು ಸೀಲ್ಡೌನ್ ಮಾಡಲಾಗಿದೆ.
ಪ್ರಸಕ್ತ ಶಿವಮೊಗ್ಗ ಸೊಂಕತರ ಸಂಖ್ಯೆ 116 ಆಗಿದ್ದರೆ, ಈಗಾಗಲೇ 88 ಜನ ಗುಣಮುಖರಾಗಿದ್ದಾರೆ. ಚನ್ನಗಿರಿ ಮೂಲದ ಮಹಿಳೆ ಸಾವು ಕಂಡಿದ್ದಾರೆ.
ಭಯದ ನಡುವೆ ಬದುಕುತಿರುವ ಮಲೆನಾಡಿನಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಎನ್ನಲಾಗುತ್ತಿದೆ
