ಶಿವಮೊಗ್ಗ, ಮೇ24: ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ವತಿಯಿಂದ ಮೇ 28 ಮತ್ತು 29ರಂದು ಪ್ರೆಸ್ ಕಾಲೋನಿಯ ಗೆಜ್ಜೆನಹಳ್ಳಿ ಮಾರ್ಗ ಮಧ್ಯದಲ್ಲಿರುವ ಜಗನ್ಮಾತೆ ಶ್ರೀ ದೊಡ್ಡಮ್ಮದೇವಿಯ ಕೆಂಡದಾರ್ಚನೆ ಮತ್ತು ದೇವಿಯ ಆರಾಧನ ಪೂಜೆಯನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಎಂ.ಎನ್.ಸುಂದರರಾಜ್ ಹೇಳಿದರು.
ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀದೊಡ್ಡಮ್ಮ ದೇವಿ ಚಾರಿಟಬಲ್ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ದೇವಿ ಉಪಾಸಕರಾದ ಸಿದ್ದಪ್ಪಾಜಿ ಅವರ ಮಾರ್ಗದರ್ಶನದಲ್ಲಿ ಹಲವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಇದರ ಮುಂದುವರೆದ ಭಾಗವಾಗಿ ಈಗ ಕೆಂಡಾದರ್ಚನೆ ಮತ್ತು “ಮಹಾಶಕ್ತಿ” ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಮೇ 28ರ ಮಧ್ಯಾಹ್ನ 12ಕ್ಕೆ ಆಯೋಜಿಸಲಾಗಿದೆ ಎಂದರು.
ದೇವಿಯ ಆರಾಧನ ಪೂಜೆಯ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಗಣಪತಿ ಪೂಜೆ ಚಂಡಿಕ ಬೀಜಾಕ್ಷರ
ಹೋಮ ಮತ್ತು ಬೆಳಿಗ್ಗೆ 9.30ಕ್ಕೆ ಶ್ರೀ ದೊಡ್ಡಮ್ಮ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಆರತಿ ಹೊತ್ತ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಬೆಳಿಗ್ಗೆ 10ಕ್ಕೆ ಭಜನಾ ಪರಿಷತ್ತಿನ ವತಿಯಿಂದ ಭಜನೋತ್ಸವ ನಡೆಯಲಿದೆ. ಮಧ್ಯಾಹ್ನ 10.30ರಿಂದ 12ರವರೆಗೆ ದೇವಿಯ ಕೆಂಡಾರ್ಚನೆ ನಡೆಯಲಿದೆ ಎಂದರು.
ಎರಡು ದಿನ ಬರುವ ಭಕ್ತರಿಗೆ ಉಪಾಹರ ಮತ್ತು ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನರಸಿಂಹಣ್ಣ, ಪುರುಷೋತ್ತಮ್, ಸಚಿನ್, ಸುಂದರೇಶ್, ಗಜೇಂದ್ರ ಕುಡಲ್ಕಾರ್ ಉಪಸ್ಥಿತರಿದ್ದರು.