ಶಿವಮೊಗ್ಗ, ಮೇ24: ಬೆಂಗಳೂರಿನಲ್ಲಿ ಛಾಯಾಗ್ರಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ವೀಡಿಯೋ ಮತ್ತು ಪೋಟೋಗ್ರಾಫರ್ಸ್ ಅಸೋಸಿಯೇಷನ್
ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎಂದು ಪತ್ರಿಭಟನೆ ನಡೆಸಲಾಯಿತು.
ಮೇ 18ರಂದು ಬೆಂಗಳೂರಿನ ಶಮ್ಸ್ ಕಲ್ಯಾಣ ಮಂಟಪದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಛಾಯಾಗ್ರಾಹಕರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ. ಅವರ ಬಳಿಯಿಂದ
ಕ್ಯಾಮರಾ ಮತ್ತು ಇತರೆ ಸಲಕರಣೆಗಳನ್ನು ಧ್ವಂಸ ಮಾಡಲಾಗಿದೆ ಇದನ್ನು ನಾವು ಖಂಡಿಸುತ್ತೇವೆ ಎಂದು ಪ್ರತಿಭಟನಕಾರರು ತಿಳಿಸಿದರು.
ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಛಾಯಾಗ್ರಾಹಕರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಕೆ.ಟಿ. ಪ್ರಮುಖರಾದ ಶ್ರೀಧರ್, ಹೆಚ್.ವಿ.ಮೋಹನ್, ಲಿಂಗರಾಜ್, ಸತೀಶ್, ಅಶೋಕ್ನಾಯಕ್, ಷಣ್ಮುಖ, ಉಮೇಶ್, ಹರ್ಷ, ಈಶ್ವರ್ ಸೇರಿದಂತೆ ಹಲವರಿದ್ದರು.