ಶಿವಮೊಗ್ಗ, ಮೇ.೦೯:
ಶಿವಮೊಗ್ಗ ಗೋಪಾಲದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಗೆ ಎಂದಿನಂತೆ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಶೇಕಡಾ ೧೦೦ರಷ್ಟು ಫಲಿತಾಂಶ ಲಭಿಸಿದ್ದು, ಲಭದ್ಯದ ಮಾಹಿತಿ ಅನುಸಾರ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಈ ಸಂಸ್ಥೆ ಕಂಡಿದೆ.


೬೧೯ ಅಂಕ ಗಳಿಸಿ ಪ್ರಣಿತ್ ಜಿ ಹಾಗೂ ವಿಧಾತ್ರಿ ಬಾಯರಿ ೬೧೯ ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲೆ ಅತ್ತುತ್ತಮ ಸ್ಥಾನವನ್ನು ಗುರುತಿಸಿಕೊಂಡಿದ್ದಾರೆ. ಫಲಿತಾಂಶದ ಅಂತಿಮ ಅಂತದ ಮಾಹಿತಿ ದೊರೆತಾಗ ವಿವರ ಸಿಗಲಿದೆ

ಅಂತೇಯೆ ಶಾಲೆಯ ಅನನ್ಯ ಕೆ.ಎಸ್ ೬೧೮, ವಿಕಾಸ್ ಡಿ.ಬಿ ೬೧೬ ಅಂಕ ಪಡೆದಿದ್ದು, ಈ ನಾಲ್ಕು ವಿದ್ಯಾರ್ಥಿಗಳು ಕನ್ನಡದಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಿರುವುದು

ವಿಶೇಷ.
ಶಾಲೆಯ ೧೯ ಮಕ್ಕಳು ೬೦೦ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ನಿಖಿಲ್ ರಾಜ್ ೬೧೫, ಅಂಕಿತ್ ೬೧೩, ಸೃಷ್ಠಿ ಕಮಲ ೬೧೦, ಟಿ. ಚಿನ್ನರೆಡ್ಡಿ ೬೦೮, ಶಕ್ತಿ ಎಸ್ ಬಾದಲ್ ೬೦೭, ಲಾವಣ್ಯ ಎಸ್.ಎಂ. ೬೦೭, ಹರೀಶ್ ಗೌಡ ೬೦೬,

ಗೋವರ್ಧನ್ ಗೌಡ ೬೦೬, ಪ್ರೇಕ್ಷಾ ಹೆಚ್.ಎಸ್. ೬೦೫, ಖಾದ್ರಿರ ೬೦೪, ಧನ್ಯ ಬಿದರೆ ೬೦೪, ಭೂಮಿಕ ಎನ್ ೬೦೪, ಮಹಮ್ಮದ್ ಶಾಹಿದ್ ೬೦೪, ಸಂಪ್ರಿತ್ ತಿವಾರಿ ೬೦೩, ಪ್ರೇರಣಾ ೬೦೦ ಅಂಕ ಪಡೆದಿದ್ದು ವಿಶೇಷ.


ಶಾಲೆಯಲ್ಲಿ ೯೫ ವಿದ್ಯಾರ್ಥಿಗಲು ಡಿಸ್ಟಿಂಕ್ಷನ್ ಪಡೆದಿದ್ದು, ೭೦ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ನಾಲ್ವರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಫಲಿತಾಂಶವನ್ನು ಕೊಡಿಸಿದ ಶಿಕ್ಷಕ ವೃಂದಕ್ಕೆಹಾಗೂ ವಿದ್ಯಾರ್ಥಿ ವೃಂದಕ್ಕೆ ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ.ನಾಗೇಶ್, ಕಾರ್ಯದರ್ಶಿ ಶೋಭಾವೆಂಕರಮಣ ಅಭಿನಂದಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!