ಶಿವಮೊಗ್ಗ, ಏ.15:
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದು ಖಚಿತವಲ್ಲವಂತೆ ನಾಮಪತ್ರ ವಾಪಸ್ ಪಡೆಯುತ್ತೀರಿ ಎಂದು ಬಿಜೆಪಿಯ ಪ್ರಮುಖರೇ ಹೇಳುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಟ್ಟ ಭಾಷೆಯಲ್ಲಿ ಹೇಳುತ್ತೇನೆ ಕೇಳಿ. ನಾನು ನಿಂತೆ ನಿಲ್ಲುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಲೋಕಸಭಾ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಹೇಳಿದರು.
ಅವರಿಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಾನು ಹಿಂದೆ ಹೇಳಿದ್ದೇನೆ ಹರಿಹರ ಬ್ರಹ್ಮ ಬಂದು ಹೇಳಿದರೂ ಕೇಳುವುದಿಲ್ಲ. ನಿಂತೇ ನಿಲ್ಲುತ್ತೇನೆ ಎಂದಿದ್ದೆ. ನಂತರ ಮೋದಿ ನಡ್ಡಾ ಬಂದು ಹೇಳಿದರೂ ಸಹ ಕೇಳುವುದಿಲ್ಲ. ನಿಲ್ಲುತ್ತೇನೆ ಎಂದಿದ್ದೆ. ಈಗ ಬಾರಿ ಜನರೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಅವರಿಗೆ ಭಯ ಶುರುವಾಗಿದೆ ಹಾಗಾಗಿ ಹೀಗೆ ಹೇಳುತ್ತಾರೆ. ನಾನು ಕೆಟ್ಟ ಭಾಷೆಯಲ್ಲಿ ಹೇಳುತ್ತೇನೆ. ನಾನು ಚುನಾವಣೆಯಲ್ಲಿ ನಿಂತೇ ನಿಲ್ಲುತ್ತೇನೆ ಎಂದು ಹೇಳಿದರು.
ನಾನು ರಾಜ್ಯಪಾಲ ಆಗಲ್ಲ ಎಂದು ಹಿಂದೆಯೇ ಹೇಳಿದ್ದೆ. ಪಕ್ಷದ ಸಂಘಟನೆಯ ಕೆಲಸ ಮಾಡುವುದಾಗಿ ಹೇಳಿದ್ದೆ. ಆಗ ಆರು ತಿಂಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇದ್ದರೂ ಮಾತನಾಡಲಿಲ್ಲ. ಯಡಿಯೂರಪ್ಪ ಅವರ ಮಗನಿಗೆ ಆ ಸ್ಥಾನವನ್ನು ನೀಡುವ ಮೂಲಕ ನಮಗೆ ಹಾಗೂ ಪಕ್ಷಕ್ಕೆ ಮಣ್ಣೆರಚಿದರು ಎಂದರು.
ನಾನು ನೋಡುತ್ತಿದ್ದೇನೆ ಕಾಂಗ್ರೆಸ್ ಹಾಗೂ ರಾಘವೇಂದ್ರರ ಬಿಜೆಪಿಯವರ ತಂಡ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನೇರವಾಗಿ ಹೊಂದಾಣಿಕೆಯಾಗಿದೆ. ನನಗೆ ನಿರೀಕ್ಷೆ ಮೀರಿ ಯುವ, ನಾರಿ ಹಾಗೂ ರೈತ ಶಕ್ತಿ ಬರುತ್ತಿದೆ ಹಾಗಾಗಿ ಸ್ಪರ್ಧೆ ಖಚಿತ ನಿಲ್ಲುವುದು ಸಹ ಅಷ್ಟೇ ಖಚಿತ ಗೆಲ್ಲುವುದು ಸಹ ನಿಶ್ಚಿತ ಎಂದು ಹೇಳಿದರು.