ಶಿವಮೊಗ್ಗ,ಏ.15:
ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಹಿಂದುತ್ವವನ್ನು ರಕ್ಷಿಸುವ, ಹಿಂದುತ್ವವನ್ನು ಕಾಪಾಡುವ, ಹಿಂದುತ್ವವನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಬೋಧನೆ ನೀಡುವಂತಹ ಸ್ವಯಂಸೇವಕರನ್ನು ರೂಪಿಸುವಂತಹ ಸಂಸ್ಥೆ. ಭಾರತೀಯ ಜನತಾ ಪಕ್ಷಕ್ಕೂ, ಆರ್ಎಸ್ಗೂ ತುಂಬಾ ವ್ಯತ್ಯಾಸಗಳಿವೆ. ಆರ್ ಎಸ್ ಎಸ್ ರೂಪಿಸಿದ ಸ್ವಯಂಸೇವಕರು ಧರ್ಮವನ್ನು ರಕ್ಷಿಸುವವರನ್ನು ಬೆಳೆಸುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಂಡಾಯ ಬಿಜೆಪಿ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಇಂದಿಲ್ಲಿ ಹೇಳಿದರು

.
ನಾನು ಆರ್ ಎಸ್ ಎಸ್ ಗರಡಿಯಲ್ಲಿ ಬೆಳೆದವನು ಇದೊಂದು ಸ್ವಯಂ ಸೇವಾ ಸಂಸ್ಥೆ. ಧರ್ಮ ಉಳಿಸುವ ಚಿಂತನೆಯನ್ನು ಸ್ವಯಂಸೇವಕರಿಗೆ ನೀಡುವಂತಹ ದಾರಿದೀಪದ ಸಂಸ್ಥೆಯಾಗಿದೆ. ಇದರಲ್ಲಿ ಎಲ್ಲಾ ರಾಜಕೀಯ ಪಕ್ಷದವರಿದ್ದಾರೆ. ಯಾವುದೇ ಪಕ್ಷವನ್ನು ಹೊಂದಿರದ ಸಾಮಾನ್ಯ ಜನರೂ ಇದ್ದಾರೆ. ಇದರ ಮುಖ್ಯ ಧ್ಯೇಯವೆಂದರೆ ಧರ್ಮವನ್ನು ರಕ್ಷಿಸುವುದೇ ಆಗಿದೆ ಎಂದರು.

ದೇಶದಲ್ಲಿ ಹಿಂದೂ ಧರ್ಮವನ್ನು ಕಾಪಾಡುವ ಭಾರತೀಯ ಜನತಾ ಪಕ್ಷಕ್ಕೆ ಎಲ್ಲೆಡೆ ಆರ್ ಎಸ್ ಎಸ್ ಬೆಂಬಲ ನೀಡುತ್ತಿದೆ. ಶಿವಮೊಗ್ಗದಲ್ಲಿ ಹಿಂದುತ್ವವಾದಿ ಹಾಗೂ ಸ್ವಯಂಸೇವಕನಾದ ನನ್ನನ್ನು ಆರ್ ಎಸ್ ಎಸ್ ಮೂಲಕ ಬೆಳೆದ ಸ್ವಯಂಸೇವಕರು ಗುರುತಿಸುತ್ತಾರೆ.

ಅಷ್ಟು ಜನ ಪ್ರಮುಖರು ನನ್ನ ನಿರ್ಧಾರವನ್ನು ಭಾರತೀಯ ಜನತಾ ಪಕ್ಷವನ್ನು ಶುಚಿಗೊಳಿಸುವ ಹಾಗೂ ಕುಟುಂಬ ರಾಜಕಾರಣವನ್ನು ಹತ್ತಿಕ್ಕುವ ನಿಲುವನ್ನು ಬೆಂಬಲಿಸಿದ್ದಾರೆ. ಪರಿಶುದ್ಧವಾಗಿ ಇರಬೇಕೆಂಬ ಆಸೆ ಅವರಲ್ಲಿದೆ ಎಂದರು.