ಶಿವಮೊಗ್ಗ,ಏ.12: ದೇಶೀಯ ವಿದ್ಯಾಶಾಲಾ ಪದವಿ ಪೂರ್ವ(ಸ್ವತಂತ್ರ) ಕಾಲೇಜಿಗೆ 2023-24ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98ರಷ್ಟು ಫಲಿತಾಂಶ ಲಭಿಸಿದ್ದು, 8 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ ಎಂದು ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಎನ್.ಕೊಳವೆ ರುದ್ರಪ್ಪಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಜ್ಞಾನ ವಿಭಾಗದಲ್ಲಿ ಶೇ.97.79, ಕಲಾವಿಭಾಗದಲ್ಲಿ ಶೇ.98.23 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98.36ರಷ್ಟು ಫಲಿತಾಂಶ ಬಂದಿದೆ ಎಂದರು.
ಪರೀಕ್ಷೆಗೆ 613 ವಿದ್ಯಾರ್ಥಿಗಳು ಹಾಜರಾಗಿದ್ದು, 241 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 337 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 23 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದರು.
ರಾಜ್ಯಮಟ್ಟದಲ್ಲಿ ಮೊದಲ 10 ಸ್ಥಾನಗಳಲ್ಲಿ 8 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ನಿತ್ಯಶ್ರೀ ಡಿ.ಎನ್. 590 ಅಂಕಗಳನ್ನು ಪಡೆದು ಶೇ. 98.04 ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 593 ಪಡೆದ ಚುಕ್ಕಿ ಕೆ.ಸಿ. 4ನೇ ರ್ಯಾಂಕ್ನ್ನು, 591 ಅಂಕ ಪಡೆದ ಸಿಂಚನ ಹೆಚ್.ಎಂ., 6ನೇ ರ್ಯಾಂಕ್ನ್ನು ಹಾಗೂ 589 ಅಂಕಪಡೆದ ಸಾಮಿಯಾ ಖುಲ್ಸಮ್ 8ನೇ ರ್ಯಾಂಕ್ ಪಡೆದಿದ್ದಾರೆ ಎಂದರು.
ವಾಣಿಜ್ಯ ವಿಭಾಗದಲ್ಲಿ 593 ಅಂಕ ಪಡೆದ ಯಶಸ್ವಿ ಹೆಚ್.ಎಂ. 5ನೇ ರ್ಯಾಂಕ್ನ್ನು, 591 ಅಂಕಪಡೆದ ನವ್ಯ ಎಂ. 7ನೇ ರ್ಯಾಂಕ್ನ್ನು, 590 ಅಂಕಪಡೆದ ರಿಯಾ ಪಿರೇರಾ 8ನೇ ರ್ಯಾಂಕ್ನ್ನು ಹಾಗೂ 589 ಅಂಕಪಡೆದ ಸಾಂಘವಿ ಆರ್. 9ನೇ ರ್ಯಾಂಕ್ ಪಡೆದಿದ್ದಾರೆ ಎಂದರು.
ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಪಡೆದಿದ್ದು, ಅರ್ಥಶಾಸ್ತ್ರದಲ್ಲಿ 15 ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನದಲ್ಲಿ 2, ಲೆಕ್ಕಶಾಸ್ತ್ರದಲ್ಲಿ 9, ಸಂಖ್ಯಾಶಾಸ್ತ್ರದಲ್ಲಿ 2, ಇತಿಹಾಸದಲ್ಲಿ 3, ರಾಜ್ಯಶಾಸ್ತ್ರದಲ್ಲಿ 2, ಸಮಾಜಶಾಸ್ತ್ರದಲ್ಲಿ 4, ಕನ್ನಡದಲ್ಲಿ 7, ಇಂಗ್ಲಿಷ್ನಲ್ಲಿ1, ಸಂಸ್ಕøತದಲ್ಲಿ 6, ಭೌತಶಾಸ್ತ್ರದಲ್ಲಿ 1, ರಸಾಯನಶಾಸ್ತ್ರದಲ್ಲಿ 1, ಗಣಿಶಾಸ್ತ್ರದಲ್ಲಿ 11, ಜೀವಶಾಸ್ತ್ರದಲ್ಲಿ 7 ವಿದ್ಯಾರ್ಥಿಗಳು 100 ಅಂಕ ಪಡೆದಿದ್ದಾರೆ ಎಂದರು.
ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿಯೂ ಒಟ್ಟಾರೆ ಶೇ.96ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಶಿಫಾನಿಯಾ ಖಾನ್, 579 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದ ಅವರು, ಸಮಿತಿಯು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿವರ್ಷವು ಉತ್ತಮ ಫಲಿತಾಂಶ ಬರುತ್ತಿದೆ.
ಇದೇ ಸಂದರ್ಭದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಆಡಳಿತ ಮಂಡಳಿವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಗೋಪಿನಾಥ್, ಡಾ. ಸತೀಶ್ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ರಾಜಶೇಖರ್, ಲಕ್ಷ್ಮೀದೇವಿ, ಎಂ.ವೆಂಕಟೇಶ್ ಉಪಸ್ಥಿತರಿದ್ದರು.