ಸಾಂದರ್ಭಿಕ ಚಿತ್ರ
ಶಿವಮೊಗ್ಗ,ಏ.11;
ಹೆಣ್ಣು ಮಕ್ಕಳ ವಿಷಯದಲ್ಲಿ ತಾಯಿ, ತಂಗಿ, ಅಕ್ಕ, ಪತ್ನಿ, ಪ್ರೇಯಸಿ,ಅತ್ತಿಗೆ, ನಾದಿನಿ ಎಲ್ಲವನ್ನು ಅತ್ಯಂತ ಪ್ರೀತಿ ಇಲ್ಲವೇ ಪ್ರೀತಿಸುವ ಜನರ ನಡುವೆ ಸಮಾಜ ಅತ್ಯಂತ ಖುಷಿಯಿಂದ ಬದುಕುತ್ತಿದೆ.
ಇದರ ನಡುವೆ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಬಗೆಗಿನ ದೂರು ಮಾತೆಯ ಅದರಲ್ಲೂ ಬಾಲಮಾತೆಯಂತ ಮಗಳ ಆಕ್ರಂದನವನ್ನು ಕಥೆಯ ಸತ್ಯದ ಹುಡುಕಾಟ ಪೊಲೀಸರ ಮುಂದೆ ಇದೆ. ನೊಂದ ಬಾಲೆಗೆ ನ್ಯಾಯ ದೊರೆಯಬೇಕಿದೆ.
ಇದೇ ಹೆಣ್ಣು ಮಗಳು ಚಿಕ್ಕಮ್ಮನ ವೇಷದಲ್ಲಿ ಸ್ವಂತ ಮಗಳ ಸಮಾನವಾಗಿರಬೇಕಿದ್ದ ಕ್ಷಣ ಮಗಳನ್ನು ಆ ಕ್ಷಣದಲ್ಲಿ ಹಾಳು ಮಾಡಿದ್ದು ಸರಿಯೇ?
ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ನ್ಯಾಯ ಸಿಗಬೇಕಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕಿದೆ.
ವಿವರ;
ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದಾಖಲಾಗಿದ್ದ ಎರಡು ಪ್ರಕರಣದಲ್ಲಿ ಮೂವರು ಆರೋಪಿಯನ್ನು ಬಂಧಿಸಲಾಗಿದೆ.
ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಮೂವರು ಬಂಧಿತ ಆರೋಪಿಗಳಾಗಿದ್ದಾರೆ. ಮದ್ಯ ಮತ್ತು ಮಾಂಸಕ್ಕಾಗಿ ಸ್ವಂತ ಅಕ್ಕನ ಮಗಳನ್ನೆ ಪಾಪದ ಕೂಪಕ್ಕೆ ತಳ್ಳಿರುವ ಚಿಕ್ಕಮ್ಮಳ ಕ್ರೌರ್ಯಕ್ಕೆ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ದೂರು ದಾಖಲಾಗಿರುವ ಘಟನೆ ವರದಿಯಾಗಿದೆ.
ಘಟನೆಯ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳ ಬಂಧನವಾಗಿದೆ.
ಹಬ್ಬದ ಹಿನ್ನಲೆಯಲ್ಲಿ ಚಿಕ್ಕಮ್ಮನ ಮನೆಗೆ ಬಂದಿದ್ದ ಅಪ್ರಾಪ್ತೆಯನ್ನು ಚಿಕ್ಕಮ್ಮಳಿಗೆ ಮದ್ಯ ತಂದುಕೊಟ್ಟು ಪರಿಚಿತನಾಗಿದ್ದ ಎಂಬಾತನೊಂದಿಗೆ ಸುತ್ತಾಡಿ ಬರಲು ಅನುಮತಿ ನೀಡಿದ್ದಾಳೆ.
ಆತ ಅಪ್ರಾಪ್ತ ಬಾಲಕಿಯನ್ನು ಮನೆಯ ಹಿಂಬದಿಯ ತೋಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂಬುದಿಲ್ಲಿ ಗಂಭೀರ ಆರೋಪ. ನಂತರ ಬಾಲಕಿ ಅಳುತಿದ್ದಾಗ ಮದುವೆಯಾಗುವುದಾಗಿ ನಂಬಿಸಿದ್ದಕ್ಕೆ ಆಕೆ ಸುಮ್ಮನಾಗಿದ್ದಾಳೆ.
ಸುಮಾರು ಎರಡು ತಿಂಗಳು ಇದೇ ರೀತಿ ವಾರಕ್ಕೆ ಒಂದೆರಡು ಬಾರಿ ಆತನೊಂದಿಗೆ ಬಾಲಕಿಯನ್ನು ಚಿಕ್ಕಮ್ಮ ಕಳಿಸಿಕೊಡುತ್ತಿದ್ದಳು. ನಂತರ ಬಾಲಕಿ ಐದು ತಿಂಗಳ ಗರ್ಭಿರ್ಣಿಯಾಗಿರುವ ವಿಚಾರ ತಾಯಿಗೆ ತಿಳಿದ ನಂತರ ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ದೂರಿನಲ್ಲಿ ಅಪ್ರಾಪ್ತ ಬಾಲಕಿ ಚಿಕ್ಕಮ್ಮನ ಮನೆಯಲ್ಲಿಯೇ ಇರುವಾಗ ಚಿಕ್ಕಮ್ಮ ಸಾವಿತ್ರಿರವರ ಮನೆಗೆ ಬರುತ್ತಿದ್ದನು ಚಿಕನ್ ಮತ್ತು ಡ್ರಿಂಕ್ಸ್ ತೆಗೆದುಕೊಂಡು ಬರುತ್ತಿದ್ದನು. ಅಡುಗೆ ಮಾಡಿ ಊಟ ಮಾಡಿದ ನಂತರ ಚಿಕ್ಕಮ್ಮ ಮತ್ತು ಓರ್ವ ಮನೆಯ ಹಿಂಬಾಗ ಹೋಗಿ ಮಾತನಾಡಿಕೊಂಡು ಬಂದು ಮಲಗಿದ್ದ ಸಮಯದಲ್ಲಿ ಆತ ಅಪ್ರಾಪ್ತ ಬಾಲಕಿಯನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ನೀಡಲಾಗಿದೆ.
ಆತನಿಗೆ ಆ ಬಾಲಕಿ ತಾನು ಗರ್ಭಿಣಿಯಾಗಿದ್ದೇನೆ ಎಂದು ಅಂಗಲಾಚಿದರೂ ಅಪ್ರಾಪ್ತೆಯನ್ನ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ದಾಖಲಾಗಿದೆ. ಈ ವಿಚಾರವನ್ನು ಚಿಕ್ಕಮ್ಮನ ಗಮನಕ್ಕೆ ತಂದಾಗ ಆಯ್ತು ಬಿಡು ನಾನೇ ಹೇಳಿ ಕರೆಯಿಸಿದ್ದೆ. ಏನೂ ಆಗಲ್ಲ ಬಿಡು ಅಂತಾ ಹೇಳಿದ್ದಾರೆ.
ಈ ಬಗ್ಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಫೋಕ್ಸೋ ಕಾಯ್ದೆಯಡಿ ಒರ್ವನನ್ನು ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕುಲಗೆಟ್ಟ ಕಾಮುಕ ಲೋಕಕ್ಕೆ ಬಲಿಪಶುವಾಯಿತೇ ಬಾಲ ಮಾತೇ…?