ಶಿವಮೊಗ್ಗ, ಏಪ್ರಿಲ್ 12: ಏ.11 ರಂದು ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌಳಿಗರ ಬೀದಿ ಹಿಂಭಾಗದ ಭದ್ರಾ ಹೊಳೆಯಲ್ಲಿ ತೇಲುತ್ತಿದ್ದ ಮೃತದೇಹ ಪತ್ತೆಯಾಗಿದೆ. ಸುಮಾರು 45-50 ವರ್ಷ ವಯಸ್ಸಿನ ಈತನ ಚಹರೆ ಸುಮಾರು 05.00 ಅಡಿ ಎತ್ತರ, ದುಂಡು ಮುಖ
, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಗಾಯದ ಗುರುತು ಹಾಗ ಎಡಕಣ್ಣಿನ ಹುಬ್ಬಿನ ಮೇಲೆ ಹಳೇಯ ಗಾಯದ ಗುರುತು ಇರುತ್ತದೆ. ದೇಹದ ಹಲವೆಡೆ ಚರ್ಮ ಕೊಳೆತಿದೆ. ಕಣ್ಣುಗಳನ್ನು ಜಲಚರಗಳು ತಿಂದುಹಾಕಿವೆ.
ಮೈಮೇಲೆ ಹಳದಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಅನಾಮದೇಯ ಮೃತನ ವಾರಸ್ಸುದಾರರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ. ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಭದ್ರಾವತಿಯ ಹಳೇನಗರ ಪೊಲೀಸ್ ಠಾಣೆನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.