ಶಾಹಿ ಗಾರ್ಮೆಂಟ್ಸ್ ಗೆ ಸರ್ಕಾರ ನೀಡಿರುವ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣರ ಆರೋಪಕ್ಕೆ ಟಾಂಗ್ ಕೊಟ್ಟ ಸಂಸದ ರಾಘವೇಂದ್ರ ಅವರು
ಅಲ್ಲಿ ಸಾವಿರಾರು ತಾಯಂದಿರಿಗೆ ದುಡಿಮೆಯ ದಾರಿ ದೊರೆತಿದೆ ಎಂದರು.
ಶಿವಮೊಗ್ಗ ಇಡೀ ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಬೇಕು. ಇಡೀ ರಾಜ್ಯದ ಜನಕ್ಕೆ ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಯುವ ಜನತೆಗೆ, ಮಹಿಳೆಯರಿಗೆ ಕೆಲಸ ಸಿಗಬೇಕು ಎಂಬ ಉದ್ದೇಶದಿಂದ ಹಲವು ಬಹು ಮುಖ್ಯ ಕಾರ್ಖಾನೆಗಳನ್ನು ತರಲು ಯತ್ನಿಸಿದ್ದು ಸರಿಯಷ್ಟೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಅವರು ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಶಾಹಿ ಗಾರ್ಮೆಂಟ್ಸ್ ಜಮೀನು ವಿಚಾರದ ಕೈವಾಡ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಇವರು ಯಾರಿಗಾದರೂ ವಿಶೇಷವಾಗಿ ತಾಯಂದಿರಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ಮಾಡಿದ್ದಾರಾ? ಮುಂದಿನ 25 ವರ್ಷದ ಉದ್ದೇಶದಿಂದ ಆ ಭೂಮಿಯನ್ನು ನೀಡಲಾಗಿದೆ. ಯಾವ ತನಿಕೆ ಬೇಕಾದರೂ ಮಾಡಲಿ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಸುಮಾರು ಈಗ 25,000 ಮಹಿಳೆಯರಿಗೆ ಸ್ವಂತ ಕಾಲ ಮೇಲೆ ನಿಂತುಕೊಳ್ಳುವಂತಹ ಉದ್ಯೋಗವನ್ನು ಅಲ್ಲಿ ಕೊಡಿಸಲಾಗಿದೆ. ಸುಮ್ಮನೆ ಆ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಮಹಿಳೆಯರಿಗೆ ದೊರೆತಿರುವ ನಿತ್ಯ ದುಡಿಮೆಯ ಕೆಲಸವನ್ನು ತಪ್ಪಿಸುವುದು ಅನಗತ್ಯ ಎಂದರು.
ಹಿಂದೆ ಶಾಹೊ ಗಾರ್ಮೆಂಟ್ಸ್ ಗೆ ನೀಡಿದ ಜಮೀನು ವಿಚಾರದಲ್ಲಾಗಲಿ, ಅದರಲ್ಲಿ ನಮ್ಮ ಪಾಲಿದೆ ಎಂಬ ಮಾಹಿತಿಯಾಗಲಿ ನಮ್ಮಲ್ಲಿಲ್ಲ. ಯಾವುದೇ ಬಗೆಯಲ್ಲಿ ಬೇಕಾದರೂ ತನಿಖೆ ಮಾಡಿಕೊಳ್ಳಲಿ. ನೋಡೋಣ ಬರೀ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಹೇಳಿದರು.