ಭದ್ರಾವತಿ ತಾ. ಮಾಜಿ ಸೈನಿಕರ ಸಂಘ ಭದ್ರಾವತಿಯ ಜೀವನಾಡಿಯಾಗಿದ್ದ ವಿಐಎಸ್ ಎಲ್ ಹಾಗೂ ಎಂಪಿಎಂ ಕಾರ್ಖಾನೆಯ ಉಳಿವಿಗೆ ಒತ್ತಾಯಿಸುವ ಹಿನ್ನೆಲೆಯಲ್ಲಿ ಹೊಸ ವರುಷದ ಕ್ಯಾಲೆಂಡರ್ ರೂಪಿಸಿದೆ. ಈ ಕಾರ್ಖಾನೆಯ ಉಳಿವಿನ ಘೋಷಣೆಗಳನ್ನು ಪ್ರತಿ ಮನೆಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಕ್ಯಾಲೆಂಡರ್ ಅನ್ನು ರೂಪಿಸಿದ್ದು, ವಿಐಎಸ್‌ಎಲ್ ಉಳಿವಿಗಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರ ಜೊತೆ ಸೇರಿ ಅವರಿಗೆ ಬೆಂಬಲ ನೀಡುತ್ತಾ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಫದ ಪ್ರಮುಖರು ಹಾಜರಿದ್ದರು.
ಭದ್ರಾವತಿ,ಡಿ.29:
ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ನೂತನ ಅಧ್ಯಕ್ಷರಾಗಿ ಸುಬೇದಾರ್ ಗುಲ್ಗುಲೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಹೇಶ್, ಕಾರ್ಯದರ್ಶಿಯಾಗಿ ಜಿ.ವಿ. ಗಿರಿ, ಸಹ ಕಾರ್ಯದರ್ಶಿಯಾಗಿ ಹರೀಶ್, ಖಜಾಂಚಿಯಾಗಿ ಬೋರೇಗೌಡ ಹಾಗೂ ಉದಯ್ ಕುಮಾರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೂತನವಾಗಿ ಆಯ್ಕೆಯಾದಂತಹ ಪದಾಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಸಮಸ್ತ ಮಾಜಿ ಸೈನಿಕರ ಬೆಂಬಲವನ್ನು ಸಹ ಸೂಚಿಸಲಾಗಿದೆ.
ಅದೇ ರೀತಿ ನಿರ್ದೇಶಕರಾಗಿ ರಮೇಶ್ ಬಿವಿ, ದಿವಾಕರ್, ವೀರಮಣಿ, ಸುರೇಶ್, ಶೇಷಾಚಲ, ಉಮೇಶ್ ಜೆ, ದೇವರಾಜ್ ಎಸ್, ದೇವರಾಜ ಆರ್, ಶ್ರೀನಿವಾಸ್ ಆರ್ ಕೆ, ಶ್ರೀನಿವಾಸ್ ರೆಡ್ಡಿ ಇವರುಗಳನ್ನ ಸಂಘದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸುವುದರ ಮುಖಾಂತರ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ನಮ್ಮ ಸಂಘದ ಕಾರ್ಯ ಚಟುವಟಿಕೆಗಳಿಗೆ ಹಿರಿಯರಾಗಿ ಹಾಗೂ ಸಲಹಾ ಸಮಿತಿಗಳಾಗಿ ಅಶೋಕ್ ಎಲ್ ಡಿ. ದಿನೇಶ್ ಕುಮಾರ್. ಮುದುಗಲ ರಾಮರೆಡ್ಡಿ, ರಮೇಶ್ ವಿ. ಕಾರ್ಯಕಾರಣಿ ಸಭೆಯ ಸಮ್ಮುಖದಲ್ಲಿ ಗೌರವಾನ್ವಿತ ಅಧ್ಯಕ್ಷ ರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಗೌರವಾಧ್ಯಕ್ಷಮೇಜರ್ ವಿಕ್ರಂ ಕೆದ್ಲಾಯ್ ಅವರು ಈ ಆಯ್ಕೆ ಪ್ರಕ್ರಿಯೆಯ ಪ್ರಮುಖ ಪಾತ್ರ ವಹಿಸಿದ್ದರು.