ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳಲ್ಲಿ ಅರಿತುಕೊಳ್ಳಲು ವಿಫುಲ ಅವಕಾಶಗಳಿದ್ದು, ಅತ್ಯಾಧುನಿಕ ಮುಂದುವರಿದ ತಂತ್ರಜ್ಞಾನದ ಸಂಪೂರ್ಣ ಮಾಹಿತಿಯನ್ನು ಮತ್ತು ನೂತನ ಸಂಶೋಧನೆಗಳ ಬಗ್ಗೆ ಅರಿತುಕೊಳ್ಳಲು ಇದೊಂದು ಸದಾವಕಾಶವಾಗಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಅಶ್ವತ್ಥ ನಾರಾಯಣ ಶೆಟ್ಟಿ
ಅವರು ಇಂದು ಜೆಎನ್‌ಎನ್‌ಸಿಇ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನೀಯರಿಂಗ್ ವಿಭಾಗದಿಂದ ಆನ್‌ಲೈನ್ ಮೂಲಕ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಮೂರನೇ ಮಲ್ಟಿ ಮೀಡಿಯಾ ಪ್ರೊಸೆಸ್ಸಿಂಗ್ ಕಮ್ಯೂನಿಕೇಷನ್ ಅಂಡ್ ಇನ್‌ಫರ್‌ಮೇಷನ್ ಟೆಕ್ನಾಲಜಿ ಕುರಿತು ಅಂತರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮೆಕ್ಸಿಕೋದ ಯು.ಎನ್.ಎಸ್. ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಕಾರ್ಲೊಸ್‌ಕೋ ಇಲೊ ಅವರು ಈ ಕಾರ್ಯಾಗಾರವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಎನ್‌ಇಎಸ್ ಉಪಾಧ್ಯಕ್ಷರು ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಒಂದು ಆಲದ ಮರದ ರೀತಿಯಲ್ಲಿ ಬೆಳೆದಿದ್ದು, ಇದರ ನೆರಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸಂಸ್ಥೆ ಅನೇಕ ರೀತಿಯ ಅವಕಾಶಗಳನ್ನು ಕಲ್ಪಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಅದೇ ರೀತಿ ಪ್ರಾಧ್ಯಾಪಕರೂ ಕೂಡ ಜಾಣ ಮಕ್ಕಳನ್ನು ತಯಾರಿಸುವ ಪ್ರಯತ್ನ ಮಾಡೋಣ. ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅರಿಯಲು ವಿಫುಲ ಅವಕಾಶಗಳಿದ್ದು, ಇದರ ಬಗ್ಗೆ ಕಾಲಕ್ಕೆ ತಕ್ಕಂತೆ ಬದಲಾಗಿ ಹೆಚ್ಚಿನ ಮಾಹಿತಿ ನಾವು ತಿಳಿದು ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಾಧ್ಯಾಪಕರ ವೃಂದ ಶ್ರಮಿಸಬೇಕು ಎಂದರು.
ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಸಂಶೋಧನಾತ್ಮಕ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆಯಾಗಿದೆ. ಇದೊಂದು ಅಪೂರ್ವ ಅವಕಾಶವಾಗಿದೆ. ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಿದ ಹೆಮ್ಮೆ ಸಂಸ್ಥೆಗೆ ಇದೆ. ಕಂಪ್ಯೂಟರ್ ತಂತ್ರಜ್ಞಾನ ಅತ್ಯಾಧುನಿಕ ಮಾಹಿತಿಗಳು ಇಲ್ಲಿ ವಿನಿಮಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜೆಎನ್‌ಎನ್‌ಸಿಯ ಡೀನ್ ರಜತ್ ಹೆಗ್ಡೆ, ಪ್ರಭಾರ ಪ್ರಾಂಶುಪಾಲರಾದ ಡಾ.ಪಿ. ಮಂಜುನಾಥ್, ವಿಭಾಗದ ಮುಖ್ಯಸ್ಥ ಪ್ರೊ. ಸತ್ಯನಾರಾಯಣ್ ಮೊದಲಾದವರು ಇದ್ದರು.