ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ : ಸತ್ಯ, ಶುದ್ಧ ತತ್ತ್ವದ ತಳಹದಿಯ ಮೇಲೆ ಸಮಾಜವನ್ನು ಬೆಳೆಸುವುದೇ ಎಲ್ಲ ಧರ್ಮಗಳ ಗುರಿ. ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕು ನೀಡುತ್ತದೆ. ಸದಾಕಾಲ ಪರೋಪಕಾರ, ಸಮಾಜಪರ ಚಿಂತನೆ, ಸತ್ಕಾರ್ಯದಲ್ಲಿ ತೊಡಗಿಕೊಂಡರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂಬ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವಲ್ಲಿ ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯು ಮಾಡುತ್ತಿದೆ.
ಹೌದು ಶಿವಮೊಗ್ಗ ನಗರದ ಲಕ್ಷ್ಮೀ ಗ್ಯಾಲಾಕ್ಸಿಯಲ್ಲಿರುವ ಸ್ಟೈಲ್ ಡ್ಯಾನ್ಸ್ ಕ್ರೀವ್ ಸಂಸ್ಥೆಯ ಸಂಸ್ಥಾಪಕ .ಎಸ್. ಶಶಿಕುಮಾರ್ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶನನ್ನು ಪ್ರತಿಷ್ಟಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಧರ್ಮಗಳನ್ನು ಗೌರವಿಸುವ ಬಗ್ಗೆ ತಿಳಿಸಿದ್ದಾರೆ.
ಧರ್ಮದಲ್ಲಿ ಆಚರಣೆಗಳು ಭಿನ್ನವಾದರೂ ಕೊನೆಗೆ ಸೇರುವ ಗುರಿ ಮಾತ್ರ ಒಂದೇ. ಜಾತಿಗಿಂತ ನೀತಿ, ತತ್ತ್ವಕ್ಕಿಂತ ಆಚರಣೆ, ಮಾತಿಗಿಂತ ಕತಿ, ಬೋಧನೆಗಿಂತ ಸಾಧನೆ, ವ್ಯಕ್ತಿ ನಿಷ್ಠೆಗಿಂತ ತತ್ತ್ವ ನಿಷ್ಠೆಯನ್ನು ಅಳವಡಿಸಿಕೊಂಡು ಧಾರ್ಮಿಕ ತಳಹದಿ ಸಂಸ್ಕಾರಭರಿತ ಸಮಾಜ ರೂಪುಗೊಳ್ಳಬೇಕು. ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧರ್ಮಗಳ ಜನರು ಒಂದೇ ಸೂರಿನಡಿ ಸೌಹಾರ್ಧತೆಯಿಂದ ಬದುಕುತ್ತಿದ್ದು, ಇದು ನಮ್ಮ ಸಂಸ್ಕೃತಿಯ ಮೂಲ ಎಂದು ಮಕ್ಕಳಿಗೆ ತಿಳಿಸಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಯಾವುದೇ ಒಂದು ಬೀಜ ಮೊಳಕೆ ಬಿಟ್ಟ ಕೂಡಲೇ ಅದರ ಆರೈಕೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಬೇಕಾದ ಪೋಷಕಾಂಶಗಳನ್ನೂ ನೀಡಬೇಕು. ನೀರು ಗೊಬ್ಬರ ಸರಿಯಾಗಿ ಹಾಕಿ, ಚೆನ್ನಾಗಿ ನೋಡಿಕೊಂಡರೆ ಆ ಮೊಳಕೆಯೊಡೆದ ಬೀಜವು ಸಮೃದ್ದವಾಗಿ ಬೆಳೆದು, ಉತ್ತಮ ಫಸಲನ್ನು ಕೊಡಲು ಸಾಧ್ಯ.
ತೆಯೇ ಮಕ್ಕಳಿಗೆ ನಾವು ಬಾಲ್ಯದಲ್ಲಿಯೇ ಒಳ್ಳೆಯ ಬುದ್ದಿ, ಸಂಸ್ಕಾರಗಳನ್ನು ನೀಡಬೇಕು. ಮಕ್ಕಳ ಆಸಕ್ತಿಗಳನ್ನು ಗಮನಿಸಬೇಕು. ಅದಕ್ಕೆ ಹೆತ್ತವರು ಪ್ರೋತ್ಸಾಹ ಕೊಡಬೇಕು. ಬೆಳೆಯುವ ಮಕ್ಕಳನ್ನು ಬಾಲ್ಯದಲ್ಲಿಯೇ ಬೇಕಾದಂತೆ ತಿದ್ದಿಕೊಳ್ಳಬೇಕು. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎಂಬ ಮಾತಿನಂತೆ ಮಕ್ಕಳನ್ನು ಎಳೆವಯಸ್ಸಿನಲ್ಲೇ ತಿದ್ದಬೇಕು. ಬಾಲ್ಯದಲ್ಲಿ ನಾವು ಕಲಿಸುವ ಎಲ್ಲವನ್ನೂ ಮಗು ಕಲಿತುಕೊಳ್ಳುತ್ತದೆ. ಆದಕಾರಣ ಮಕ್ಕಳಿಗೆ ಬಾಲ್ಯದಿಂದಲೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಮುಂದೆ ಮಕ್ಕಳು ಯಶಸ್ಸಿನ ಗುರಿಯನ್ನು ತಲುಪಬಹುದು.
ಮಕ್ಕಳನ್ನು ಒಳ್ಳೆಯ ಸತ್ಪ್ರಜೆಗಳಾಗಿ ಮಾಡುವುದು ಸ್ಟೈಲ್ ಡ್ಯಾನ್ಸ್‌ಗ್ರೂಪ್‌ನ ಆಶಯ.