ಶಿವಮೊಗ್ಗ, ಆ.19:
ಮತ್ತೆ ಶಿವಮೊಗ್ಗದಲ್ಲಿ ಹಾಫ್ ಹೆಲ್ಮೆಟ್ ತೆರವಿನ ಕಾರ್ಯಾಚರಣೆಗೆ ಪೊಲೀಸರು ಇಳಿದಿದ್ದು, ಸೀನಪ್ಪ ಶೆಟ್ಟಿ ವೃತ್ತದಲ್ಲಂತೂ ಬೈಕ್ ಸವಾರರು ಮರು ಮಾತಾಡದೇ ತಲೆಯಮೇಲಿದ್ದ ಹಾಫ್ ಹೆಲ್ಮೆಟ್ ಕೊಟ್ಟು ನಗುತ್ತಲೇ ಪಯಣಿಸಿದ್ದು ವಿಶೇಷವಾಗಿತ್ತು.


ದಂಡ ವಿಧಿಸದೆ ಈ ಕಾರ್ಯಾಚರಣೆ ಮಾಡಲು ಎಸ್ಪಿ ಮಿಥುನ್ ಕುಮಾರ್ ಸೂಚಿಸಿದ್ದ ಬೆನ್ನಲ್ಲೇ ಇಲ್ಲಿ ಕಾರ್ಯಾಚಾರಣೆಗಿಳಿದ ಸಂಚಾರಿ ಪೊಲೀಸ್ ಇನ್ಸ್ ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ತಂಡಕ್ಕೆ ಜನಸ್ಪಂದನೆ ಅತ್ಯಂತ ವಿಶೇಷವಾಗಿತ್ತು.
ಈ ಸರ್ಕಲ್ ಸೇರಿದಂತೆ ನಗರದ ಹಲವೆಡೆ ಸಾವಿರಾರು ಹೆಲ್ಮೆಟ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ಮಹಾವೀರ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹಮದ್ ಕಾಲೋನಿ, ವಿದ್ಯಾನಗರ ಸೇರಿ ಹಲವಾರು ವೃತ್ತಗಳ ಬಳಿ ನಿಂತ ಪೊಲೀಸರು ಹಾಫ್ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅವುಗಳನ್ನು ವಶಕ್ಕೆ ಪಡೆದಿದ್ದಾರೆ.


ನೇರವಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಫೀಲ್ಡ್ ಗೆ ಇಳಿದಿದ್ದು ವಿಶೇಷವಾಗಿತ್ತು. ಡಿವೈಎಸ್ಪಿ ಸುರೇಶ್, ಪಿಐ ಸಂತೋಷ್ ಕುಮಾರ್, ಪಿಎಸ್ಐ ತಿರುಮಲೇಶ್, ತಿಮ್ಮಯ್ಯ ಸೇರಿ ಹಲವಾರು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಕಾರ್ಯಾಚರಣೆ ವೇಳೆ ಪೊಲೀಸರ ಉತ್ತಮ ಕಾರ್ಯಾಚರಣೆಗೆ ಸಾರ್ವಜನಿಕರೇ ಸಿಹಿ ಹಂಚಿದ್ದು ಮತ್ತೊಂದು ವಿಶೇಷ. ಕೊನೆ ಕೊನೆಗೆ ಈ ಕಾರ್ಯಾಚರಣೆಯಲ್ಲಿ ಹಾಫ್ ಹೆಲ್ಮೆಟ್ ಧರಿಸಿದವರೆ ಖುದ್ದಾಗಿ ಬಂದು ಹಾಕಿ ಹೋಗಿದ್ದು ವಿಶೇಷವಾಗಿತ್ತು.


ಡಿವೈಎಸ್ಪಿ ಸುರೇಶ್ ಮಾತನಾಡಿ ಕಳೆದ ಎರಡು 20 ತಿಂಗಳಿಂದ ಈ ಜಾಗೃತಿ ನಡೆಸಲಾಗುತ್ತಿದೆ. ಕೆಲ ಅಂಗಡಿಗಳಿಗೂ ಭೇಟಿ ನೀಡಿ ಹಾಪ್ ಹೆಲ್ಮೆಟ್ ಮಾರಾಟ ಮಾಡದಂತೆ ಜಾಗೃತಿ ನೀಡಲಾಗಿದೆ. ಇನ್ನೂ ಕೆಲ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಅವರನ್ನೂ ಸಂಪರ್ಕಿಸಲಾಗುವುದು. ಎಲ್ಲರೂ ಐಎಸ್ಐ ಮಾರ್ಕಿರುವ ಹೆಲ್ಮೆಟ್ಟೇ ಧರಿಸಬೇಕೆಂದು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!