ಶಿವಮೊಗ್ಗ : ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ನಿತ್ಯ ಜಾರಿಯಾಗುತ್ತಾ ಎಂದು ವ್ಯಂಗ್ಯವಾಡುವ ಕೆಲವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಸಂಪುಟದಲ್ಲೇ ಛಡಿಏಟು ನೀಡಿರುವುದು ಸರಿಯಷ್ಟೇ. ಪ್ರಣಾಳಿಕೆ ಮಾತು ಜಾರಿಯಾಗುವ ಮುನ್ನ ತಾಳ್ಮೆಯ ಕಾಯುವಿಕೆ ಸಾಮಾನ್ಯ ವಾಗಿರಬೇಕಷ್ಟೆ ಆದರೆ ರಾಜಕೀಯ ದುರುದ್ದೇಶದಿಂದ ವ್ಯಂಗ್ಯ ಮಾಡುವುದನ್ನು ಹಾಗೂ ಹಿಂದಿನ ಅವಧಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರನಾಳಿಕೆ ವಿಚಾರದ ಬಗ್ಗೆ ಮಾತನಾಡದೆ ಕೇವಲ ಹೊಸ ಸರ್ಕಾರದ ಬಗ್ಗೆ ಟೀಕಾ ಪ್ರಹಾರ ನಡೆಸುವ ಉದ್ದೇಶದಿಂದ ಅವಾಚ್ಯ ಹಾಗೂ ಉವಾಚಗಳನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ?
ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ತಿಳಿಸಿದಂತೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮನೆಯೊಡತಿಗೆ 2 ಸಾವಿರ, ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ಪದವಿಧರರಿಗೆ ನಿರುದ್ಯೋಗ ಭತ್ಯೆ ೩ ಸಾವಿರದಿಂದ 5 ಸಾವಿರ, ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ೨೦೦ ಯೂನಿಟ್ ವಿದ್ಯುತ್ ಪ್ರತಿ ತಿಂಗಳು ಉಚಿತ, ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪ್ರತಿತಿಂಗಳು ತಲಾ 10 ಕೆ.ಜಿ. ಅಕ್ಕಿ ಉಚಿತ, ಉಚಿತ ಪ್ರಯಾಣ ಯೋಜನೆಯಡಿ ಮಹಿಳೆಯರಿಗೆ ಬಸ್ ಸಂಚಾರ ಉಚಿತ ಎಂಬ ಐದು ಗ್ಯಾರೆಂಟಿಗಳ ವಿಷಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದು ಸರಿಯಷ್ಟೆ. ಆದರೆ ಇಲಿ ಒಂದು ಕಾನೂನು ಜಾರಿಯಾಗಬೇಕಾದರೆ ಅದಕ್ಕೆ ಅದರದೇ ಆದ ನಿಯಮಗಳು, ಕಾನೂನು ಆರ್ಥಿಕ ಇಲಾಖೆಯ ಅನುಮೋದಲನೆ ಅಗತ್ಯ ಎಂಬುದನ್ನು ಮರೆತಿರುವ ಕೆಲವರು ಯೋಜನೆ ಜಾರಿಯಾಯಿತಾ ಎಂದು ವ್ಯಂಗ ವಾಡುವುದನ್ನು ಕೈಬಿಡಬೇಕಿದೆ.
ಈ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಪ್ರಸಕ್ತ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವವರ ಸಂಖ್ಯೆ ಶೇ.೨೦೦ಕ್ಕೂ ಹೆಚ್ಚಿರುವುದು ಒಂದೆಡೆ ಆತಂಕ ವ್ಯಕ್ತವಾಗಿದೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರುವ ಮಾಹಿತಿಯೊಂದರ ಪ್ರಕಾರ ಬಹುತೇಕ ವಿದ್ಯುತ್ ಒಲೆಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ ಏಕೆಂದರೆ ಉಚಿತ ವಿದ್ಯುತ್ ದೊರೆಯುತ್ತದೆ ಎಂಬ ಹಮ್ಮಿನಿಂದ ಎನ್ನಲಾಗುತ್ತದೆ. ಇದು ವ್ಯಂಗ್ಯದ ವಿಷಯವೋ ಅಥವಾ ನೈಜ್ಯ ವಿಷಯವೋ ಗೊತ್ತಿಲ್ಲ.
ಒಟ್ಟಾರೆ ಒಂದು ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಪೂರಕ ಪಕ್ಷ ತಾನು ಕೈಗೊಳ್ಳುವ ಜನೋಪಯೋಗಿ ಯೋಜನೆಗಳ ಬಗ್ಗೆ ಪ್ರನಾಳಿಕೆ ಬಿಡುಗಡೆ ಮಾಡುತ್ತದೆ. ರಾಜ್ಯದ ಆರ್ಥಿಕ ಸ್ಥಿತಿ ಗತಿಯ ಆಧಾರದ ಮೇಲೆ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರುವ ಕಾರ್ಯ ನಡೆಯುತ್ತದೆ.
ಸಣ್ಣ ಜ್ಞಾನವೂ ಇಲ್ಲದವರು ಈ ವಿಷಯವನ್ನು ವ್ಯಂಗ್ಯವಾಗಿ ಬಳಸಿಕೊಳ್ಳಲು ಹೆಚ್ಚುತ್ತಿರುವುದು ಕಂಡು ಬರುತ್ತದೆ. ಯಾವುದೇ ಜನೋಪಕಾರಿ ಯೋಜನೆ ನಿಜಕ್ಕೂ ನೊಂದ ಸಾರ್ವಜನಿಕರಿಗೆ ಮಾತ್ರ ಸಿಗುವಂತಾಗಲಿ.