ಶಿವಮೊಗ್ಗ: ಬಿಜೆಪಿಗೆ ಮತ ಹಾಕಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾಾರೆ ಎನ್ನಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ ಎಸ್ಪಿ ಕಚೇರಿಗೆ ದೂರು ನೀಡಲು ಬಂದಿದ್ದ ಆಟೋ ಚಾಲಕ ಹರೀಶ್ ರಾವ್ ಸ್ನೇಹಿತರೊಂದಿಗೆ ಸೋಮಿನಕೋಪ್ಪದ ಬಾರ್‌ನಲ್ಲಿ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಸ್ನೇಹಿತರಾದ ಅಬ್ರಾಾರ್ ಮತ್ತು ನಜ್ರುಲ್ಲಾ ಯಾರಿಗೆ ಮತಹಾಕಿದೆ ಎಂದು ಕೇಳಿದ್ದಾರೆ.

ಹರೀಶ್ ರಾವ್ ಬಿಜೆಪಿಗೆ ಮತಹಾಕಿದ್ದೇನೆ ಎಂದು ಹೇಳಿದ್ದಕ್ಕೆ ಅಬ್ರಾರ್ ಮತ್ತು ನಜ್ರುಲ್ಲಾ ಹಲ್ಲೆ ಮತ್ತು ಆಟೋವನ್ನ ಜಖಂಗೊಳಿಸಿರುವುದಾಗಿ ಆರೋಪಿಸಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ಬಂದಿದ್ದನು. ಅಲ್ಲಿ ದೂರು ನೀಡಲು ಬಂದಿದ್ದ ಈಶ್ವರಪ್ಪನವರ ಕಾಲಿಗೆ ಬಿದ್ದ ಹರೀಶ್ ರಾವ್ ರಕ್ಷಣೆ ನೀಡುವಂತೆ ಕಣ್ಣೀರು ಹಾಕಿದ್ದನು.


ಆದರೆ, ಸಂಜೆ ವೇಳೆ ಇಬ್ಬರು ಕುಡಿದು ಗಲಾಟೆ ಮಾಡಿಕೊಂಡಿದ್ದಾಾರೆ. ಅಲ್ಲದೆ ಆಟೋ ಚಾಲಕ ದೂರು ದಾಖಲಿಸುವುದಕ್ಕೂ ನಿರಾಕರಿಸಿದ್ದಾಾನೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!